ಶಿವಮೊಗ್ಗ: ಕರ್ನಾಟಕ ಆರ್ಯ ವೈಶ್ಯ ಜನಾಂಗದ ಪ್ರಮುಖರು, ವಾಸವಿ ವಿದ್ಯಾಲಯ ಶಿವಮೊಗ್ಗ, ವಾಸವಿ ಅಕಾಡೆಮಿ ಶಿವಮೊಗ್ಗ, ಇದರ ಪ್ರಧಾನ ಕಾರ್ಯದರ್ಶಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಉಪಾಧ್ಯಕ್ಷರೂ ಆದ ಶಿವಮೊಗ್ಗ ನಗರದ ಗಣ್ಯರಲ್ಲಿ ಒಬ್ಬರಾದ ಶ್ರೀಯುತ ಎಸ್.ಕೆ.ಶೇಷಾಚಲ ಅವರು ತಮ್ಮ ೬೭ ನೇ ಹುಟ್ಟು ಹಬ್ಬವನ್ನು ವರ್ಷವಿಡೀ ಸಂಸ್ಕೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ವಿಶೇಷವಾಗಿ ಆಚರಿಸಲು ನಿರ್ದರಿಸಿದ್ದಾರೆ.
ಅವರು ಇಂದು ೦೧.೦೨.೨೦೨೨ ರ ಮಂಗಳವಾರ ಬೆಳಿಗ್ಗೆ ಶಿವಮೊಗ್ಗ ನಗರದ ಕನ್ನಿಕಾ ಪರಮೇಶ್ವರಿ ದೇವಾಲುದಲ್ಲಿ ಅವರ ಅಭಿಮಾನಿ ಬಳಗ, ಕುಟುಂಬದ ಸದಸ್ಯರು ಮತ್ತು ಅವರ ಸ್ನೇಹಿತರು ಹಮ್ಮಿಕೊಂಡಿದ್ದ ಜನ್ಮದಿನಾಚರಣೆ ಸಂದರ್ಭದಲ್ಲಿ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡುತ್ತ ಸಂಸ್ಕೃತ ಭಾಷೆಯ ಕಲಿಕೆಯನ್ನು ಶಿಶುವಿಹಾರದಿಂದ ಏಳನೇ ತರಗತಿಯ ನಮ್ಮ ಕರ್ನಾಟಕ ರಾಜ್ಯದ ಸುಮಾರು ಒಂದು ಲಕ್ಷ ಮಕ್ಕಳಿಗೆ ಕಲಿಸುವ ಯೋಜನೆಯೊಂದನ್ನು ರೂಪಿಸಿದ್ದು ಇದನ್ನು ಸಾಕಾರಗೊಳಿಸಲು ಈ ಹಂತದ ಮಕ್ಕಳಿಗಾಗಿಯೇ ಪುಸ್ತಕಗಳನ್ನು ಹೊರ ತಂದಿರುವ ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿರುವ ಸಂಸ್ಕೃತ ಭಾರತಿ ಮತ್ತು ಶಿವಮೊಗ್ಗ ನಗರದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಸಹಕಾರದೊಂದಿಗೆ ನಡೆಸುವುದಾಗಿ ತಿಳಿಸಿದರು.
ಸಂಸ್ಕೃತ ಕಲಿಕೆಯ ಜೊತೆಗೆ ಮಕ್ಕಳಲ್ಲಿ ಸಾಹಸ ಪ್ರವೃತ್ತಿ ಬೆಳೆಸಲು ಎಳೆಯರಿಗಾಗಿ ಹಿಮಾಲಯ ಪರ್ವತಾರೋಹಣ, ಪ್ರಕೃತಿ ಅಧ್ಯಯನ ಶಿಬಿರ, ರಾಕ್ ಕ್ಲೈಂಬಿAಗ್, ಚಾರಣ, ಕಯಾಕಿಂಗ್ ಕೂಡ ನಡೆಸಲು ಈಗಾಗಲೇ ಶಿವಮೊಗ್ಗ ನಗರದ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದವರ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕಾರ ನೀಡುವಂತಹ ಶಿಕ್ಷಣದ ಅವಶ್ಯಕತೆ ಮನಗಂಡು ಈ ನಿರ್ದಾರ ತೆಗೆದುಕೊಂಡಿರುವುದಾಗಿ ತಿಳಿಸಿದ ಶೇಷಾಚಲ ಅವರು ನಮ್ಮ ಪೂರ್ವಜರು ನಮಗೆ ನೀಡಿದ ಶಿಕ್ಷಣ ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕಾಗಿದ್ದು ನಮ್ಮ ಧರ್ಮ, ಅದಕ್ಕೊಸ್ಕರವಾಗಿ ನಾನು ೨೦೨೨ ವರ್ಷವನ್ನು ಸಂಸ್ಕೃತಕ್ಕಾಗಿ ಮೀಸಲಾಗಿಟ್ಟು, ಅದರ ಪ್ರಚಾರ ಪ್ರಸಾರ ಮಾಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಪಟ್ಟಾಭಿರಾಮ ರವರು ಈ ಸಂದರ್ಭದಲ್ಲಿ ಮಾತನಾಡುತ್ತ ಶೇಷಾಚಲರವರ ನಿರ್ದಾರವನ್ನು ಸ್ವಾಗತಿಸುತ್ತ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾದ ಸಂಸ್ಕೃತ ಭಾಷೆಯ ಪುನರುತ್ಥಾನಕ್ಕೆ ತೆಗೆದುಕೊಂಡ ನಿರ್ಧಾರ ಸ್ವಾಗತರ್ಹವಾಗಿದೆ.
ರಾಜ್ಯದ ವಿವಿಧ ಶಾಲೆಗಳಲ್ಲಿ ಅವರು ಸಂಸ್ಕೃತವನ್ನು ಅಳವಡಿಸಿಕೊಳ್ಳಲು ವರ್ಷವಿಡೀ ಕಾರ್ಯ ನಿರ್ವಹಿಸಲು ಯೋಚಿಸಿರುವುದು ಪ್ರಸ್ತುತ ಸನ್ನಿವೇಶದಲ್ಲಿ ಸಕಾರಾತ್ಮಕ ಚಿಂತನೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಜನ್ಮ ದಿನಾಚರಣೆಯನ್ನು ಈ ರೀತಿಯಾಗಿ ಆಚರಿಸಿದರೆ ನಮ್ಮ ದೇಶ ವಿಶ್ವದಲ್ಲೇ ಗುರು ಸ್ಥಾನವನ್ನು ಪಡೆಯುವುದರಲ್ಲಿ ಸಂಶಯವೇ ಇಲ್ಲಾ, ಸಂಘ ಪರಿವಾರದ ಎಲ್ಲಾ ಸಂಘಟನೆಗಳು ಇವರ ಯೋಜನೆಗೆ ಕೈ ಜೋಡಿಸುತ್ತೆ ಎಂದು ಶೇಷಾಚಲ ಅವರ ಸಂಸ್ಕೃತ ಕಾರ್ಯ ಸಂಕಲ್ಪವನ್ನು ಸ್ವಾಗತಿಸಿದರು. ಸಂಸ್ಕೃತ ಎಲ್ಲರ ಭಾಷೆ, ಇದಕ್ಕೆ ಜಾತಿಯ ಹಣೆಪಟ್ಟಿಯನ್ನು ಯಾರೂ ಕಟ್ಟಬಾರದೆಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಮಾತನಾಡುತ್ತ ಶ್ರೀಯುತ ಶೇಷಾಚಲ ರವರು, ತಮ್ಮ ೬೭ ನೇ ಜನ್ಮದಿನವನ್ನು ಕೇವಲ ಒಂದು ದಿನಕ್ಕೆ ಮೀಸಲಿಡದೆ ವರ್ಷವಿಡೀ ಸಂಸ್ಕೃತ ಪ್ರಚಾರ, ಪ್ರಸಾರಕ್ಕೆ ಮೀಸಲಿಟ್ಟಿರುವುದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದಾರೆ, ಅವರ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದು ಹೇಳಿದರು.
ಉತ್ತಮವಾಗಿ ಮಾದರಿಯಾಗಿ ತಮ್ಮ ಹುಟ್ಟು ಹಬ್ಬವನ್ನು ವರ್ಷವಿಡೀ ಸಂಸ್ಕೃತದೊAದಿಗೆ ಸಂಭ್ರಮವನ್ನು ಆಚರಿಸಲು ತೀರ್ಮಾನಿಸಿದ್ದು ಸಂತಸದ ಸಂಗತಿ ಹಾಗೂ ಇತರರೂ ಅನುಕರಣೆ ಮಾಡುವ ಸಂಗತಿಯಾಗಿದೆ, ನಾನು ಅವರ ಜೊತೆ ವರ್ಷವಿಡೀ ಸಂಸ್ಕೃತ ಕಾರ್ಯಕ್ರಮದಲ್ಲಿ ಕೈ ಜೋಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಎನ್.ಗೋಪಿನಾಥ್ ಅವರು ಮಾತನಾಡುತ್ತ, ಶೇಷಾಚಲ ರವರ ಸಂಸ್ಕೃತ ಯೋಜನೆ ಇಂದು ನಮ್ಮ ಮಕ್ಕಳಿಗೆ ಅವಶ್ಯಕವಾಗಿ ಬೇಕಾಗಿದೆ ಈ ನಿಟ್ಟಿನಲ್ಲಿ ಅವರು ತಮ್ಮ ಜನ್ಮ ದಿನಾಚರಣೆಯನ್ನು ವರ್ಷವಿಡೀ ಈ ರೀತಿ ಆಚರಿಸುವ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡಿದ್ದಾರೆ. ಪ್ರತಿಯೊಬ್ಬರು ತಮ್ಮ ಜನ್ಮದಿನವನ್ನು ಒಂದೊAದು ಒಳ್ಳೆಯ ಉದ್ದೇಶಕ್ಕಾಗಿ ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿ ವರ್ಷವಿಡೀ ಅಚರಿಸಿದರೆ, ಸಮಾಜದಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ತರಲು ಸಾದ್ಯವಾಗುತ್ತದೆ ಎಂದರು.
ಶಿವಮೊಗ್ಗ ನಗರದ ವಾಣಿಜ್ಯೋದ್ಯಮಿಯಾದ ಹರ್ಷಕಾಮತ್ ಮಾತನಾಡುತ್ತ ಶ್ರೀಯುತ ಶೇಷಾಚಲ ರವರು ಉತ್ತಮವಾಗಿ ಮಾದರಿಯಾಗಿ ತಮ್ಮ ಹುಟ್ಟು ಹಬ್ಬವನ್ನು ವರ್ಷವಿಡೀ ಸಂಸ್ಕೃತದೊAದಿಗೆ ಸಂಭ್ರಮವನ್ನು ಆಚರಿಸಲು ತೀರ್ಮಾನಿಸಿದ್ದು ಸಂತಸದ ಸಂಗತಿ ಹಾಗೂ ಇತರರೂ ಅನುಕರಣೆ ಮಾಡುವ ಸಂಗತಿಯಾಗಿದೆ, ನಾನು ಅವರ ಜೊತೆ ವರ್ಷವಿಡೀ ಸಂಸ್ಕೃತ ಕಾರ್ಯಕ್ರಮದಲ್ಲಿ ಕೈ ಜೋಡಿಸುವುದಾಗಿ ತಿಳಿಸಿದರು.
ಇವರ ಈ ಯೋಜನೆಗೆ ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲಾ ಸಂಚಾಲಕ ಟಿ.ವಿ.ನರಸಿಂಹ ಮೂರ್ತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಕಾರ್ಯಾಧ್ಯಕ್ಷರಾದ ಎಸ್.ಎಸ್.ವಾಗೇಶ್ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ತಿಳಿಸಿರುತ್ತಾರೆ.