ಇಂದು ತೀರ್ಥಹಳ್ಳಿಯಲ್ಲಿ ತೀರ್ಥಹಳ್ಳಿ DySp ಶಾಂತವೀರ್ ರವರು ತಾಲ್ಲೂಕು ಮಟ್ಟದ ಎಲ್ಲಾ ಲಾಡ್ಜ್ ಮತ್ತು ಹೋಂ ಸ್ಟೇ ಮಾಲೀಕರ ಸಭೆ ನಡೆಸಿ ಎಲ್ಲರಿಗೂ ಕಾನೂನಾತ್ಮಕ ತಿಳುವಳಿಕೆ ನೀಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನೀವೆಲ್ಲರೂ ವ್ಯವಹಾರ ಮಾತ್ರ ಮಾಡದೆ ರಾತ್ರಿ ಸಮಯದಲ್ಲೂ ಕೂಡ ಹೊರಗಿನಿಂದ ಬಂದವರಿಗೆ ವಸತಿಯನ್ನು ಒದಗಿಸುತ್ತಿದ್ದೀರಿ ಇದು 1ರೀತಿಯ ಸಮಾಜ ಸೇವೆ ಎಂದು ತಿಳಿಸಿದರು. ಎಲ್ಲಾ ಮಾಲೀಕರಿಗೂ ತಾವು ಮಾಡುತ್ತಿರುವ ಕೆಲಸವನ್ನು ಕಾನೂನಿನ ಪರಿಧಿಯೊಳಗೆ ಸ್ವಾಸ್ಥ್ಯ ಸಮಾಜದ ಜಾಗೃತಿಯೊಂದಿಗೆ ಹೇಗೆ ನಡೆಸಬೇಕೆಂದು ಕಿವಿಮಾತು ಹೇಳಿದರು.

ಗ್ರಾಹಕರ ದಾಖಲಾತಿಗಳ ಪರಿಶೀಲನೆ ಹಾಗೂ ನಿರ್ವಹಣೆ ಬಗ್ಗೆ ಎಲ್ಲರಿಗೂ ತಿಳಿಸಿಕೊಟ್ಟರು. ಸಭೆಯಲ್ಲಿ ತೀರ್ಥಹಳ್ಳಿ ಇನ್ಸ್ ಪೆಕ್ಟರ್ ಪ್ರವೀಣ್ ನೀಲಮ್ಮನವರ್, ಮಾಳೂರು ಸಬ್ ಇನ್ಸ್ ಪೆಕ್ಟರ್ ಜಯಪ್ಪ ನಾಯಕ , ಆಗುಂಬೆ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ , ಪೊಲೀಸ್ ಸಿಬ್ಬಂದಿಗಳು ಹಾಗೂ ತಾಲ್ಲೂಕಿನ ಲಾಡ್ಜ್ ಮತ್ತು ಹೋಂ ಸ್ಟೇ ಮಾಲೀಕರು ಗಳು ಉಪಸ್ಥಿತರಿದ್ದರು