ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ 24*7 ಕುಡಿಯುವ ನೀರಿನ ಅವ್ಯವಸ್ಥೆ ಮತ್ತು ಅವೈಜ್ಞಾನಿಕ ನೀರಿನ ಬಿಲ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ಮಾಡಿ ಒಮ್ಮತದ ತೀರ್ಮಾನ ಕೈಗೊಳ್ಳಲು ದಿನಾಂಕ 5 – 2 – 2022 ರ ಶನಿವಾರ ಸಂಜೆ 6 ಗಂಟೆಗೆ ಸರಿಯಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸಾರ್ವಜನಿಕರ ಸಭೆಯನ್ನು ಕರೆಯಲಾಗಿದೆ.

ತೆರಿಗೆದಾರ ಬಂಧುಗಳೇ ನಾವೀಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಆಸ್ತಿ ತೆರಿಗೆ, ವಿದ್ಯುತ್ ತೆರಿಗೆ ನಂತರ ಇದೀಗ ನೀರಿನ ತೆರಿಗೆ ಹೀಗೆ ವಿಪರೀತವಾಗಿ ಹೆಚ್ಚುತ್ತಿರುವ ತೆರಿಗೆಗಳನ್ನು ಭರಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿಗೆ ತೆರಿಗೆದಾರರು ತಳ್ಳಲ್ಪಟ್ಟಿದ್ದಾರೆ.
ಇದಕ್ಕೆಲ್ಲ ನಾವುಗಳೇ ಹೊಣೆಗಾರರು.ಯಾವುದೇ ಪ್ರತಿಭಟನೆ, ವಿರೋಧಗಳನ್ನು ವ್ಯಕ್ತಪಡಿಸದೆ ಎಲ್ಲವನ್ನೂ ಒಪ್ಪಿಕೊಂಡು ಜೀವನ ಸಾಗಿಸುತ್ತಿರುವ ನಮ್ಮ ಮೃದು ಧೋರಣೆಯೇ ನಮ್ಮ ಮೇಲಿನ ಶೋಷಣೆಗೆ ಕಾರಣವಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.ಎಲ್ಲರಿಗೂ ಆಗುವುದು ನನಗೂ ಆಗುತ್ತದೆ ಎನ್ನುವ ಹಗುರ ಮನೋಭಾವನೆಯಿಂದ ಮೊದಲು ಹೊರಬರಬೇಕಾಗಿದೆ.

ತೆರಿಗೆದಾರ ಬಂಧುಗಳೇ, ಸಭೆಯಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿ ಒಮ್ಮತದ ತೀರ್ಮಾನಗಳನ್ನು ಕೈಗೊಳ್ಳೋಣ.
ಬನ್ನಿ ನಮ್ಮೊಂದಿಗೆ ಕೈಜೋಡಿಸಿ. ಸಂಘಟನೆಯೇ ಶಕ್ತಿಯಾಗಲಿ.

ಡಾ. ಸತೀಶ್ ಕುಮಾರ್ ಶೆಟ್ಟಿ… ಕೆ.ವಿ.ವಸಂತ್ ಕುಮಾರ್…