ಶಿವಮೊಗ್ಗ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಎಂಎಸ್ಎಂಇಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಟಾಟಾ ಪವರ್ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಾಲ ಯೋಜನೆ ಕಾರ್ಯಕ್ರಮವನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಉದ್ಘಾಟಿಸಿದರು.

ಎಸ್.ಬಿ.ಐ. ಜೊತೆಯಲ್ಲಿ ಟಾಟಾ ಪವರ್ ಸೋಲಾರ್ ಅಳವಡಿಸಲು ಎಂಎಸ್ಎಂಇಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಹಾಗೂ ದೀರ್ಘಕಾಲದ ಸಾಲ ಯೋಜನೆ ದೇಶಾದ್ಯಂತ ಅಳವಡಿಸಲು ಒಪ್ಪಂದವಾಗಿರುತ್ತದೆ. ಈ ಮೂಲಕ ದೇಶದಲ್ಲಿಯೇ ಮೊದಲ ಸಾಲ ವಿತರಣೆ ಹಾಗೂ ಗ್ರಾಹಕರ ಸಮಾವೇಶ ನಗರದ ಕ್ಲಾರ್ಕ್ಸ್ ಇನ್ ಹೋಟೆಲ್ ನಲ್ಲಿ ನಡೆಯಿತು.ಶಿವಮೊಗ್ಗದ ಹೆಸರಾಂತ ಕೈಗಾರಿಕೋದ್ಯಮಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಮೆ. ಶಾಂತಲಾ ಗ್ರೂಪ್ ಆಫ್ ಇಂಡಸ್ಟ್ರೀಸ್, ಪರ್ಫೆಕ್ಟ್ ಅಲಾಯ್ಸ್ ಸೇರಿದಂತೆ 20 ಕ್ಕೂ ಹೆಚ್ಚು ಕೈಗಾರಿಕಾ ಆಡಳಿತ ಮಂಡಳಿಯವರು ಭಾಗವಹಿಸಿ ಎಸ್.ಬಿ.ಐ.ನ ಈ ಯೋಜನೆಯನ್ನು ಶ್ಲಾಘಿಸಿದರು.

ಎಸ್.ಬಿ.ಐ. ಮುಖ್ಯ ವ್ಯವಸ್ಥಾಪಕ ವೃಷಭ್ ರಾಘವ್, ಮಾಚೇನಹಳ್ಳಿ ಸಣ್ಣ ಕೈಗಾರಿಕಾ ಸಂಘದ ರಮೇಶ್ ಹೆಗ್ಡೆ, ಟಾಟಾ ಪವರ್ ಸೋಲಾರ್ ನ ರಾಜ್ಯ ಮಾರಾಟ ವ್ಯವಸ್ಥಾಪಕ ಪ್ರಶಾಂತ್ ಬೈಂದೂರು, ವಲಯಾಧಿಕಾರಿ ದರ್ಶನ್ ಹೆಗ್ಡೆ, ಹಣಕಾಸು ಅಧಿಕಾರಿ ಭಾರ್ಗವ್, ಟಾಟಾ ಪವರ್ ಸೋಲಾರ್ ನ ಪ್ರಾತ್ಯಕ್ಷಿಕೆ ವಿವರಿಸಿದರು.ಕಾರ್ಯಕ್ರಮದಲ್ಲಿ ಟಾಟಾ ಪವರ್ ಸೋಲಾರ್ ನ ಸ್ಥಳೀಯ ಚಾನೆಲ್ ಪಾರ್ಟ್ನರ್ ಸುರೇಶ್ ಶೆಣೈ ಮತ್ತು ಸಿಬ್ಬಂದಿ ವರ್ಗದವರು, ಎಸ್.ಬಿ.ಐ. ಶಾಖೆ ಕಾರ್ಯನಿರ್ವಾಹಕರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…