06/02/2022 ಭಾನುವಾರ ಶಿವಮೊಗ್ಗ ನಗರದ, ಬಿ.ಹೆಚ್. ರಸ್ತೆಯ ಕರ್ನಾಟಕ ಸಂಘ ಪಕ್ಕದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಮಿಡ್ಲ್ ಸ್ಕೂಲ್) ಆವರಣದಲ್ಲಿ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕಿನ ಬೀರನ ಕೆರೆಯ ಗ್ರಾಮದ ಶ್ರೀ ಯುತ ಚಂದ್ರನಾಯ್ಕ್ ರವರು, ಪ್ರಾಥಮಿಕ ಶಿಕ್ಷಣ 1ರಿಂದ 4ನೇ ತರಗತಿ ವರೆಗೂ ಬೀರನ ಕೆರೆಯ ಗ್ರಾಮದಲ್ಲಿ 5 ರಿಂದ 7ನೇ ತರಗತಿ ಮೈನ್ ಮಿಡ್ಲ್ ಸ್ಕೂಲ್ ನಲ್ಲಿ, 8 ರಿಂದ 10 ವರೆಗೆ ಬಸವೇಶ್ವರ ಪ್ರೌಢಶಾಲೆ, ಮೀನಾಕ್ಷಿ ಭವನದ ಪದವಿ ಪೂರ್ವ ಕಾಲೇಜಿನಲ್ಲಿ 11ಮತ್ತು 12 ತರಗತಿ, ಪದವಿ ವ್ಯಾಸಂಗ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಅಂತಿಮ ವರ್ಷದಲ್ಲಿ ಇರುವಾಗ ಸಹ್ಯಾದ್ರಿ ಕಾಲೇಜಿನಲ್ಲಿ ಆರ್ಮಿ ಸೆಲೆಕ್ಷನ್ ಕ್ಯಾಂಪಸ್ ನಲ್ಲಿ ಆಯ್ಕೆ ಯಾಗಿ ಇಪ್ಪತ್ತು ವರ್ಷಗಳ ಕಾಲ ಸುದೀರ್ಘ ದೇಶ ಸೇವೆಯಲ್ಲಿ ತೊಡಗಿಸಿಕೊಂಡು 31/01/2022 ರಂದು ಸೈನೆಯಿಂದ ನಿವೃತ್ತ ರಾಗಿರುತ್ತಾರೆ.

ದೇಶ ಸೇವೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ನಮ್ಮ ರಾಷ್ಟ್ರವನ್ನು ಶತೃಗಳಿಂದ ಕಾಪಾಡಲು ಶ್ರಮಿಸಿದ ವೀರಾ ಸೈನಾನಿಗೆ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದಿಂದ ಸನ್ಮಾನ್ಯ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸೈನಾನಿ ಚಂದ್ರನಾಯ್ಕ್ ರವರು, ನಮ್ಮಂತ ಸೈನಿಕರ ಗುರುತಿಸಿ ಸನ್ಮಾನ ಮಾಡುವ ತಮ್ಮೆಲ್ಲ ದೇಶದ ಅಭಿಮಾನಿಗಳಿಗೆ ನಿಮ್ಮ ಪ್ರೀತಿಗೆ ಅಭಾರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ನಾನು ಒಂದೇ ತರಗತಿಯಿಂದ 7ನೇ ತರಗತಿಯ ವರೆಗೆ ಮೈನ್ ಮಿಡ್ಲ್ ಶಾಲೆಯಲ್ಲಿ ಓದಿದೆ, ನಾನು ದೇಶ ಸೇವೆಯಲ್ಲಿ ತೊಡಗಬೇಕು ಎಂದು ಬಹಳಷ್ಟು ಆಸೆ ಇತ್ತು, 4 ರಿಂದ 7ನೇ ತರಗತಿಯಲ್ಲಿ ಇರುವಾಗ ಸೇವಾದಳದಲ್ಲಿ ಇದ್ದು, 8 ರಿಂದ 10ನೇ ತರಗತಿಯನ್ನು ಮೀನಾಕ್ಷಿ ಭವನದ ಸರ್ಕಾರಿ ಪ್ರೌಢಶಾಲೆಯಲ್ಲಿ ಇರುವಾಗ (ಜೆಡಿ ಜೂನಿಯರ್ ಡಿವಿಜನ್) NCC ಮಾಡಿ, ನಂತರ ಕಾಲೇಜು ವ್ಯಾಸಂಗ ಸಹ್ಯಾದ್ರಿ ಕಾಲೇಜಿನಲ್ಲಿ ಓದಿ SD( senear division) NCC ಯಲ್ಲಿ ಕೆಡೇಟ್ ನಿಂದ CSUO ರ ರ್ಯಾಂಕ್ ಪಡೆದು, NCCಯ ಎಲ್ಲಾ RD, BLC ಹಾಗೂ ಇತರೆ ಕ್ಯಾಂಪ್ ನಲ್ಲಿ ಭಾಗವಹಿಸಿ, ಪ್ರಪ್ರಥಮವಾಗಿ ಶಿವಮೊಗ್ಗ ಜಿಲ್ಲೆಯಿಂದ BLC (Basic leader ship comp) ಮೂಲಕ ಬೆಸ್ಟ್ ಶೂಟರ್ ರಾಗಿ ದೆಹಲಿಯಲ್ಲಿ ಭಾಗವಹಿಸಿ, LT/General ರವರಿಂದ ಪದಕವು ಪಡೆದವು, ನಂತರ ಬಂದು ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ NCC ತರಬೇತಿಯನ್ನು ಸೆರ್ಟ್ಯೂಟ್ ಹೌಸ್ ಹೆಲಿಪ್ಯಾಡ್ ನಲ್ಲಿ ತರಬೇತಿ ನೀಡಿರುವೆ ಅದರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಆರ್ಮಿ ಯಲ್ಲಿ ಇದ್ದಾರೆ, ಅದರಲ್ಲಿ ಬೀರನ ಕೆರೆಯ ಚಂದ್ರನಾಯ್ಕ್ ರವರು ಒಬ್ಬರು, ನಾನು ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಆರ್ಮಿ ಸೆಕ್ಷನ್ ಕ್ಯಾಂಪ್ ನಲ್ಲಿ ಭಾಗವಹಿಸಿ, ರನ್ನಿಂಗ್ ನಲ್ಲಿ ಹಿಂದೆ ಉಳಿದೆ, ಆದರೂ ಕೂಡ ನಿಸ್ವಾರ್ಥ ಸೇವೆ (ನಿಷ್ಕಾಮ ಸೇವಾ) ಗೃಹರಕ್ಷಕ ದಳದಲ್ಲಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಗಳ ರಕ್ಷಣೆಗಾಗಿ ಈಗಲೂ ಸೇವೆ ಸಲ್ಲಿಸುತ್ತಿರುವೆ. ಎಂದು ಹೇಳಿದರು.

ಈ ಸನ್ಮಾನ್ಯ ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಶ್ರೀ ವಿನಯ್ ಕುಮಾರ್, ಶ್ರೀ ಬಾಬು, ಶ್ರೀ ಅವಿನಾಶ್, ಶ್ರೀ ಗೋಪಾಲ್, ಶ್ರೀ ಮಣಿ ಗೌಂಡರ್, ಶ್ರೀ ನಾಗೇಶ್, ಶ್ರೀ ನಾಗರಾಜ್, ಶ್ರೀ ರಾಘವೇಂದ್ರ, ಶ್ರೀ ಮಂಜುನಾಥ, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…