ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಗ್ರಾಮದ ವಾಸಿ ಒಬ್ಬರ 3 ವರ್ಷದ ಮಗನಿಗೆ ಆರೋಗ್ಯ ಸಮಸ್ಯೆಯಿದ್ದು ಮಧು ಎಂಬ ವ್ಯಕ್ತಿಯು ಇವರಿಗೆ ನೀವು ಹಿಂದೂ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಬಂದರೆ ನಿಮ್ಮ ಕಷ್ಟಗಳೆಲ್ಲ ದೂರವಾಗಿ ನಿಮ್ಮ ಮಗನ ಆರೋಗ್ಯ ಸುಧಾರಿಸುತ್ತದೆ ಎಂದು ಬೋಧನೆ ಮಾಡುತ್ತಿದ್ದು ದಿನಾಂಕ: 06-02-2022 ರಂದು ಬೆಳಗ್ಗೆಯೂ ಕೂಡ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನು ನೀಡಿ ಇವನ್ನು ಮನೆಯಲ್ಲಿಟ್ಟು ಪ್ರಾರ್ಥಿಸಿ ಹೇಳಿರುತ್ತಾನೆ.

ಹಾಗೂ ನಿಮ್ಮ ಮನೆಯಲ್ಲಿರುವ ಹಿಂದೂ ದೇವರ ಫೋಟೋಗಳನ್ನು ತೆಗೆಯಿರಿ ನಿಮಗೆ ಒಳ್ಳೆಯದಾಗುತ್ತದೆ ಎಂದು ಒತ್ತಾಯ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಂಖ್ಯೆ 0033/2022 ಕಲಂ 417,295(a) IPC ರೀತ್ಯಾ ಪ್ರಕರಣ ದಾಖಲಿಸಿ ಪಿಐ ವಿನೋಬನಗರ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ತನಿಖೆ ಕೈಗೊಂಡು ಆರೋಪಿ ಮಧು 34 ವರ್ಷ ಕಾಶಿಪುರ ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿದ್ದು, ಆರೋಪಿಯು ಅಕ್ರಮವಾಗಿ ಕಟ್ಟಿದ ಕಟ್ಟಡದಲ್ಲಿ ಕಾನೂನುಬಾಹಿರವಾಗಿ ಈ ರೀತಿಯ ಚಟುವಟಿಕೆಯನ್ನು ನಡೆಸುತ್ತಿದ್ದು ಕಂಡು ಬಂದಿರುತ್ತದೆ.