ಶಿವಮೊಗ್ಗ: ಸಾಧುಶೆಟ್ಟಿ ಸಮಾಜದ ಸಂಘದ ದೇವಸ್ಥಾನಗಳ ಆಸ್ತಿ ಮತ್ತು ಹಣ ದುರುಪಯೋಗವಾಗಿರುವುದರಿಂದ ಸಂಘದ ಮತ್ತು ಟ್ರಸ್ಟ್ ಅನ್ನು ಕೂಡಲೇ ಸೂಪರ್ ಸೀಡ್ ಮಾಡಬೇಕೆಂದು ಆಗ್ರಹಿಸಿ ಕರುನಾಡು ಯುವಶಕ್ತಿ ಸಂಘಟನೆ(ಕೆವೈಎಸ್) ವತಿಯಿಂದ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಯಾಗ ಕ್ಷತ್ರಿಯ ಸಾಧುಶೆಟ್ಟಿ, ಶ್ರೀ ಕಾಮಾಕ್ಷಿ ದೊಡ್ಡಮ್ಮ ಮತ್ತು ಜಲದುರ್ಗಮ್ಮ  ಹಾಗೂ ಪಂಚಮುಖಿ ಆಂಜನೇಯ ದೇವಸ್ಥಾನದ ಸಮಿತಿಗೆ ಸುಮಾರು 60 ವರ್ಷಗಳಿಂದ ಅಧ್ಯಕ್ಷರು ಹಾಗೂ ನಿರ್ದೇಶಕರಾಗಿ ಅವರೇ ಆಯ್ಕೆಯಾಗುತ್ತಿದ್ದಾರೆ. ಇವರು ಸಾಧುಶೆಟ್ಟಿ ಸಮಾಜದ ಆಸ್ತಿಯನ್ನು ಇವರ ಕುಟುಂಬದ್ದೆಂದು ಉಪಯೋಗಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.ಈಗಾಗಲೇ ಶ್ರೀ ಕಾಮಾಕ್ಷಿ ಬೀದಿ ಗಣಪತಿ ದೇವಸ್ಥಾನದ ಆಸ್ತಿಯನ್ನು ಸಮಿತಿಯ 13 ನಿರ್ದೇಶಕರು ಮತ್ತು 80 ವರ್ಷದ ಎನ್. ಉಮಾಪತಿ ನೇತೃತ್ವದಲ್ಲಿ ಟ್ರಸ್ಟ್ ಮಾಡಿಕೊಂಡಿದ್ದಾರೆ. ಸದರಿ ಮೇಲ್ಕಂಡ ಆಸ್ತಿ ಮತ್ತು ದೇವಸ್ಥಾನಗಳಿಗೆ ಟ್ರಸ್ಟ್ ಮಾಡಲು ಹೊರಟಿದ್ದಾರೆ.

ಇವರು ಸಮಾಜದ ಏಳಿಗೆ ಮಾಡಿಲ್ಲ. ಇವರ ಕುಟುಂಬದ ಆಸ್ತಿಯನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಇವರ ಮೇಲೆ ಈಗಾಲೇ ನ್ಯಾಯಾಲಯದಲ್ಲಿ ದಾವೆ ಚಾಲ್ತಿಯಲ್ಲಿದೆ. ನಗರಸಭೆಯಿಂದ 1974 ರಲ್ಲಿ ದೇವಸ್ಥಾನಕ್ಕೆ ಮಂಜೂರಾದ ಜಾಗ ಮಾರಾಟ ಮಾಡಬಾರದೆಂದು ಷರತ್ತು ಇದ್ದರೂ, ದೇವಸ್ಥಾನ ಪರವಾಗಿ ಅದರ ಸಮಿತಿಗೆ ಸರ್ಕಾರ ಸೂಚನೆ ನೀಡಿದೆ. ಆದರೆ, ಜಾಗದ ಪೈಕಿ 2018 ರಲ್ಲಿ ಸರ್ಕಾರದಿಂದ ದೇವಸ್ಥಾನಕ್ಕೆ ಕೊಟ್ಟಂತಹ ಆಸ್ತಿ ಬೇರೆಯವರಿಗೆ ಈ ಆಸ್ತಿಯನ್ನು ದಾನ ಪತ್ರ ಮಾಡಿ ರಿಜಿಸ್ಟ್ರಾರ್ ಮಾಡಿರುತ್ತಾರೆ. ಇದರ ಬಗ್ಗೆ ಸಮಿತಿ ವತಿಯಿಂದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಈ ಮೂರು ದೇವಸ್ಥಾನಗಳ ಆಸ್ತಿ ಮತ್ತು ಆದಾಯದ ಬಗ್ಗೆ ಯಾವುದೇ ಲೆಕ್ಕ ಪತ್ರವಾಗಲಿ ಸಂಘದ ಸದಸ್ಯತ್ವದ ನೋಂದಣಿ ಮಾಡಿಲ್ಲ. ಈ ಬಗ್ಗೆ ಸಹಕಾರ ಸಂಘಗಳ ನೋಂದಣಾಧಿಕಾರಿಗಳು ನೋಟಿಸ್ ನೀಡಿದ್ದು, ಮತ್ತು ಎನ್. ಉಮಾಪತಿ ನೇತೃತ್ವದ 11 ಜನರ ತಂಡದ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಆದ್ದರಿಂದ ಕೂಡಲೇ ಸಂಘ ಹಾಗೂ ಟ್ರಸ್ಟ್ ಅನ್ನು ಸೂಪರ್ ಸೀಡ್ ಮಾಡಬೇಕು. ಇದಕ್ಕೆ ಸಂಬಂಧಪಟ್ಟಂತೆ ಸಮಿತಿ ಪದಾಧಿಕಾರಿಗಳ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ ಕೆವೈಎಸ್ ಸಂಸ್ಥಾಪಕ ಅಧ್ಯಕ್ಷ ಎಸ್. ವಸಂತಕುಮಾರ್, ರಾಜ್ಯಾಧ್ಯಕ್ಷ ಎ.ಆರ್. ಶರವಣ, ರಾಜ್ಯ ಯುವ ಘಟಕದ ಅಧ್ಯಕ್ಷ ಉಪಸ್ಥರಿದ್ದರು.

ವರದಿ ಮಂಜುನಾಥ್ ಶೆಟ್ಟಿ…