ಹೊಸಮನೆ 6ನೇ ಮುಖ್ಯರಸ್ತೆ ಮೂರನೇ ಅಡ್ಡರಸ್ತೆ ಫಾತಿಮಾ ಗೋರಿ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಯಿಂದ ಯುಜಿಡಿ ಗುಂಡಿಗೆ ಜಲ್ಲಿ ಮಣ್ಣು ತುಂಬಿ ಬ್ಲಾಕ್ ಆಗಿದ್ದು ಈ ಭಾಗದ ಸುಮಾರು 50ಕೂ ಹೆಚ್ಚು ಮನೆಗಳಿಗೆ ಕೊಳೆ ನೀರು ಮಿಶ್ರಿತ ನಲ್ಲಿ ನೀರಿಗೆ ಸೇರಿ ಇಲ್ಲಿಯ ಎಷ್ಟು ಮಕ್ಕಳಿಗೆ ವಯಸ್ಸಾದವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಬಡಾವಣೆಯ ಜನರು ತತ್ತರಿಸಿ ಹೋಗಿರುತ್ತಾರೆ ಯು ಜಿ ಡಿ ಸಮಸ್ಯೆಯಿಂದ ಈಗಾಗಲೇ ರೋಸಿಹೋಗಿರುವ ಜನರು ಈ ಕಲುಷಿತ ನೀರು ಕುಡಿದು ಇನ್ನಷ್ಟು ಆರೋಗ್ಯದಲ್ಲಿ ಹದಗೆಡಿಸಿ ಕೊಂಡಿದ್ದು ಸ್ಮಾರ್ಟ್ ಸಿಟಿ ಕಾಮಗಾರಿ ಮಾಡುವ ಅಧಿಕಾರಿಗಳಿಗೆ ಈ ನೀರನ್ನು ಕುಡಿಸಲು ಹೊಸಮನೆಯ ಜನ ಕಾಯುತ್ತಿದ್ದಾರೆ.

ಇತ್ತ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಿವಿ ಇದ್ದರೂ ಕಿವುಡರಾಗಿ ಕಣ್ಣಿದ್ದರು ಕುರುಡರಾಗಿ ಬಾಯಿ ಇದ್ದರೂ ಮೂಕರಾಗಿ ವರ್ತಿಸುತ್ತಿರುವುದು ನೋಡಿದರೆ ಇವರು ಗುತ್ತಿಗೆದಾರನ ಪರವಾಗಿದ್ದಾರೋ ಎಂದು ಅನುಮಾನ.

ನಮ್ಮ ಕ್ಷೇತ್ರದ ಶಾಸಕರು ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುವ ತುಂಬಾ ಸ್ಮಾರ್ಟ್ ಆಗಿರುವ ಪಾರ್ಕು ರಸ್ತೆಗಳಿಗೆ ಹೋಗಿ ವಾರಕ್ಕೊಮ್ಮೆ ವೀಕ್ಷಣೆ ಮಾಡಿದರೆ ಸಾಲದು ತಾವುಗಳು ಮೊದಲು ಇಂತಹ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡಿ ನಿಮ್ಮ ಅಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಿ.

ರೇಖಾ ರಂಗನಾಥ್
ಸದಸ್ಯರು
ಶಿವಮೊಗ್ಗ ಮಹಾನಗರ ಪಾಲಿಕೆ