ಶಿವಮೊಗ್ಗ: ನಗರದಲ್ಲಿ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ನಗರದಲ್ಲಿ ಉಂಟಾದ ಈ ಅಹಿತಕರ ಪ್ರಕ್ಷುಬ್ದ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯಮಟ್ಟದಲ್ಲಿ ತಲೆದೋರಿರುವ ಹಿಜಾಬ್-ಕೇಸರಿ ವಿವಾದವು ಶಿವಮೊಗ್ಗ ನಗರಲ್ಲಿಯೂ ಕೆಲವು ಅಹಿತಕರ ಘಟನೆಗಳು ನಡೆದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವುದು ದುರದೃಕರ ಎಂದರು.ಫೆ. 8 ರಂದು ನಗರದಲ್ಲಿ ನಡೆದ ಅಹಿತಕರ ಘಟನೆಗಳ ಸಂಬಂಧ ತಾವು ಶಿಸ್ತು ಪಾಲನೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ 144 ನೇ ಸೆಕ್ಷನ್ ಜಾರಿ ಮಾಡಿರುವುದು ಸರಿಯಷ್ಟೆ.  ಆದರೆ ಹಲವು ನಗರ ಪ್ರದೇಶಗಳಲ್ಲಿ ಬಲತ್ಕಾರವಾಗಿ ಏಕಾಎಕಿ ಅರಕ್ಷಕ ಇಲಾಖೆಯವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿರುವುದು ವ್ಯಾಪಾರಸ್ಥರು ತೊಂದರೆಗ ಒಳಗಾಗಿರುತ್ತಾರೆ ಎಂದರು.

ವ್ಯಾಪಾರಸ್ತರು ಇದೀಗ ಕೊರೋನಾ ಸಂಕಷ್ಟದಿಂದದ ಚೇತರಿಸಿಕೊಳ್ಳುತ್ತಿದ್ದು, ತಮ್ಮ ಉದ್ಯೋಗ,  ಜೀವನೋಪಾಯಕ್ಕಾಗಿ ವ್ಯಾಪಾರ ಮಾಡಿಕೊಂಡು ಸುದಾರಿಸಿಕೊಳ್ಳ್ಳುತ್ತಿರುವಾಗ ಈಗ ಮತ್ತೊಂದು ಸಂಕಷ್ಟಕ್ಕೆ  ಸಿಲುಕಿರುವುದು ತುಂಬಾ ದುರದೃಷ್ಟಕರ ಹಾಗೂ ತುಂಬಾ ತೊಂದರೆಗೆ ಒಳಗಾಗಿದ್ದಾರೆ ಎಂದರು.ಆದ್ದರಿಂದ ವಾಣಿಜ್ಯೋದ್ಯಮಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕಾಗಿ ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪಾರ-ವಹಿವಾಟುಗಳನ್ನು ನಡೆಸಲು ಅನುವುಮಾಡಿಕೊಡಬೇಕಾಗಿ ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಬಿ. ವಿಜಯಕುಮಾರ್, ನಿರ್ದೇಶಕರಾದ ಎಸ್.ಎಸ್. ಉದಯಕುಮಾರ್, ಬಿ.ಆರ್ ಸಂತೋಷ್, ಪ್ರದೀಪ್ ವಿ. ಎಲಿ, ಗಣೇಶ ಎಂ. ಅಂಗಡಿ, ಗಾಂಧಿಬಜಾರ ವರ್ತಕರ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ದಿನಕರ್, ತಾನಾಜಿ, ಕಬ್ಬಿಣ ಉಕ್ಕು ವ್ಯಾಪಾರಿಗಳ ಸಂಘ, ಫಾರ್ಮಸಿಸ್ಟ್ ಅಸೋಸಿಯೇಶನ್, ಪೈನಾನ್ಸ್ ಅಸೋಷಿಯೇಷನ್, ಜವಳಿ ವರ್ತಕರ ಸಂಘ, ನೆಹರೂ ರಸ್ತೆ ವರ್ತಕರ ಸಂಘ ಹಾಗೂ  ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು  ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…