
ಶಿವಮೊಗ್ಗ: ನಿನ್ನೆ ಬಾಪೂಜಿನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ ಅರ್ಜುನ್ ಮತ್ತು ಮಂಜುನಾಥ್ ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಅವರಿಗೆ ಧೈರ್ಯ ಹೇಳಿ, ಹಣ್ಣು ಹಂಪಲು ನೀಡಿದರು. ಘಟನೆಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ಆರ್.ಸಿ. ನಾಯ್ಕ್, ಶಾಮೀರ್ ಖಾನ್, ಮುಖಂಡರಾದ ರಂಗನಾಥ್, ರಂಗೇಗೌಡ ಮೊದಲಾದವರಿದ್ದರು.