ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನಾಂಕಃ-11-02-2022 ರಂದು ಸಂಜೆ ಪೊಲೀಸ್ ಇಲಾಖಾ ವತಿಯಿಂದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ಡಿಎಆರ್ ತುಕಡಿ, ಕೆಎಸ್ಆರ್.ಪಿ ತುಕಡಿಯೊಂದಿಗೆ ರೂಟ್ ಮಾರ್ಚ್ ನಡೆಸಲಾಯಿತು.

ಶಿವಮೊಗ್ಗ ನಗರದ ಮಿಳ್ಳಘಟ್ಟ ಕ್ರಾಸ್ ನಿಂದ ಪ್ರಾರಂಭವಾಗಿರುವ ರೂಟ್ ಮಾರ್ಚ್ ಅಣ್ಣಾ ನಗರ, ಟಿಪ್ಪು ನಗರ ಚಾನೆಲ್ ಏರಿಯಾ, ಪದ್ಮ ಟಾಕೀಸ್, ಜೆ.ಪಿ ನಗರದಿಂದ ನೇತಾಜಿ ಸರ್ಕಲ್, ಆಯನೂರು ಗೇಟ್ ಮುಖಾಂತರ ಬಿ. ಹೆಚ್ ರಸ್ತೆಯಿಂದ ಅಮೀರ್ ಅಹಮ್ಮದ್ ಸರ್ಕಲ್ ಮುಖಾಂತರ ಗಾಂಧಿ ಬಜಾರ್, ಎಂಕೆಕೆ ರಸ್ತೆ, ಲಷ್ಕರ್ ಮೊಹಲ್ಲಾ ನಂತರ ಬಿ. ಹೆಚ್ ರಸ್ತೆ ಮೂಲಕ ಡಿಎಆರ್ ಪೊಲೀಸ್ ಮೈದಾನದಲ್ಲಿ ಮುಕ್ತಾಯವಾಯಿತು.

ವರದಿ ಮಂಜುನಾಥ್ ಶೆಟ್ಟಿ…