ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಗೌರವಿಸಿರುವುದರಿಂದ, ಸಮಾಜದಲ್ಲಿ ನಮ್ಮನ್ನು ಸೇವೆಗೆ ಹೆಚ್ಚಿಗೆ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ, ಎಂದು ಶಿವಮೊಗ್ಗ ಪೋರ್ಜ್ ನ ಮಾಲಿಕರಾದ ಉಮೇಶ್ ಶಾಸ್ತ್ರಿರವರು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಕೊಡಮಾಡಿದ “ವಕೇಶನ್ ಅವಾರ್ಡ್ಸ್‌ನಲ್ಲಿ” ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.

ನಲವತ್ತು ವರ್ಷಗಳ ಹಿಂದೆ ನಮ್ಮ ಜೀವನೋಪಾಯಕ್ಕೆ ಪ್ರಾರಂಭಿಸಿದ ಈ ಸಂಸ್ಥೆ ಇಂದು ನೂರಾರು ಕುಟುಂಬಕ್ಕೆ ದಾರಿ ದೀಪ ವಾಗಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಸ್ವಹಿತ ಮೀರಿದ ಉದ್ಯೋಗಿಗಳು. ಅವರ ಸೇವಾ ಮನೋಭಾವನೆಯ ಕಾರ್ಯ, ಇಂದು ಅಂತರಾಷ್ಟ್ರೀಯ ಸಂಸ್ಥೆಯ ಗೌರವಕ್ಕೆ ಪಾತ್ರ ರಾಗುವಂತೆ ಮಾಡಿದೆ. ನಮ್ಮ ತಂದೆಯವರು ಅಂದು ರೋಟರಿ ಸಂಸ್ಥೆಯ ಸದಸ್ಯರಾಗಿದ್ದರು. ಅವರಿಂದ ಅಂತರಾಷ್ಟ್ರೀಯ ಸಂಸ್ಥೆಯ ಸೇವಾ ಮನೋಭಾವದ ಕಾರ್ಯಗಳ ಬಗ್ಗೆ ತಿಳಿದು ಕೊಂಡಿದ್ದೆ. ಈ ಗೌರವದಿಂದ ನಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆ ಇನ್ನೂ ಹೆಚ್ಚು ಗಮನಿಸುವ- ಬೆಳೆಸುವ, ಅದನ್ನು ಕಾಪಾಡಿಕೊಂಡು ಬರುವ ಜವಾಬ್ದರಿ ಹೆಚ್ಚಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾಗೇಶ್ ರವರು ಜಿಲ್ಲೆಯ ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿ, ನಲವತ್ತು ವರ್ಷಗಳಿಂದ ಇರುವುದು ಈ ಸಂಸ್ಥೆ ಮಾತ್ರ. ಸುಮಾರು ಹದಿನಾಲ್ಕು ಸಾವಿರದ ನಾಲ್ಕು ನೂರು ಶೇರ್ ಹೊಲ್ಡರ್ ಹೊಂದಿದ ಸಂಸ್ಥೆ ಇದಾಗಿದೆ. ವಿಶ್ವಾದ್ಯಂತ ತನ್ನ ವಾಹನಗಳ ಬಿಡಿ ವಸ್ತು ತಯಾರಿಕೆಯಿಂದ, ಬೇಡಿಕೆ ಉಳಿಸಿಕೊಂಡಂತಾ ಸಂಸ್ಥೆ ನಮ್ಮ ನಗರದಲ್ಲಿ ಇರುವುದು ಹೆಮ್ಮೆಯ ಸಂಗತಿ. ಇಷ್ಟೇಲ್ಲ ಪ್ರಥಮಗಳನ್ನು ಹೊಂದಿರುವ ಶಿವಮೊಗ್ಗ ಪೋರ್ಜ್ ಸಂಸ್ಥೆ ಮಾಲಿಕರನ್ನು ಗೌರವಿಸುತ್ತಿರುವುದು ನಮ್ಮ ರೋಟರಿ ಕ್ಲಬ್ ಗೆ ಹೆಮ್ಮೆಯ ಸಂಗತಿ ಎಂದರು. ರೊ.ತಾರಾನಾಥ್ ಮಾತನಾಡಿ, ಅವರ ವಿದ್ಯಾಬ್ಯಾಸಕ್ಕೆ ತಕ್ಕ ಸಂಸ್ಥೆ ಪ್ರಾರಂಭಿಸಿ, ಪ್ರಾರಂಭದಲ್ಲಿ ಅತ್ಯಂತ ಕಠಿಣ ಕಷ್ಣಗಳನ್ನು ಎದುರಿಸಿ ಗೆದ್ದು ಇಂತು ನೂರಾರು ಕುಟುಂಬಗಳನ್ನು ಸಲಹುತ್ತಿರುವ ಇವರ ಕಾರ್ಯ ವೈಕರಿ ಮೆಚ್ಚು ವಂತದ್ದು. ಇಂತವರನ್ನು ಗುರ್ತಿಸಿರುವ ನಮ್ಮ ಜ್ಯುಬಿಲಿ ಕ್ಲಬ್ ಗೆ ಗೌರವ ಹೆಚ್ಚಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಜ್ಯೂಬಿಲಿ ಅಧ್ಯಕ್ಷ ಎಸ್.ಆರ್.ಲಕ್ಷ್ಮೀನಾರಾಯಣ್ ಮಾತನಾಡಿ ಇವರ ತಂದೆ ದಿ:ಶಿವರಾಮ್ ಶಾಸ್ತ್ರಿಗಳು ವಿದ್ಯಾ ಕ್ಷೇತ್ರದಲ್ಲಿ ಅತ್ಯುತ್ತಮ ಹೆಸರು ಗಳಿಸಿದ್ದರು. ಅವರ ಮಗ ಕೈಗಾರಿಕಾ ಕ್ಷೇತ್ರದಲ್ಲಿ ಅತ್ಯುತ್ತಮ ಹೆಸರು ಗಳಿಸಿ ಯಶಸ್ವಿ ಉದ್ಯಮದಾರರಾಗಿದ್ದಾರೆ. ಇಂತವರನ್ನು ಗೌರವಿಸುತ್ತಿರುವುದು ನಮ್ಮ ಕ್ಲಬ್ಬಿನ ಭಾಗ್ಯ, ಇವರಿಗೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿಗಳು ದೊರಕುತಾಗಲಿ ಎಂದರು. ರೊ.ಭಾರದ್ವಾಜ್ ಸ್ವಾಗತಿಸಿದರು, ರೊ.ಚಂದ್ರಕಾಂತ್ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…