ಶಿವಮೊಗ್ಗ : ಸಿಎಸ್ ಆರ್ ಅಂದರೆ ಸಾಮಾಜಿಕ ಬದ್ಧತೆ ವಿಷಯದಲ್ಲಿ ಮಹೀಂದ್ರ&ಮಹೀಂದ್ರ ಕಂಪೆನಿಯು ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮಹಿಂದ್ರಾ&ಮಹಿಂದ್ರಾ ಗ್ರೂಪ್ ನ ಅಧ್ಯಕ್ಷರಾದ ಆನಂದ್ ಮಹೀಂದ್ರ ಅವರು ಈ ವಿಷಯದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಮಹೇಂದ್ರ ಕಂಪನಿ ವತಿಯಿಂದ ಫೆಬ್ರವರಿ 9 ರಿಂದ 19 ತನಕ ನಡೆಯುತ್ತಿರುವ ಸರ್ವಿಸ್ ಕ್ಯಾಂಪ್ ಉದ್ಘಾಟಿಸಿ ಕಾರ್ಯಕ್ರಮದ ಅಂಗವಾಗಿ ಬ್ಲಡ್ ಡೊನೇಷನ್ ಕ್ಯಾಂಪ್ ನಡೆಸಲಾಯಿತು. ಇದೇ ಕಾರ್ಯಕ್ರಮದ ಭಾಗವಾಗಿ ಶಿವಮೊಗ್ಗದಲ್ಲಿ ಮಹೇಂದ್ರ & ಮಹೇಂದ್ರ ಕಂಪೆನಿ ವತಿಯಿಂದ 21 ಅನಾಥ ಮಕ್ಕಳನ್ನು ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಕರೆದುಕೊಂಡು ಹೋಗಿದ್ದರು.

ಅನಾಥ ಮಕ್ಕಳ ಮುಖದಲ್ಲಿ ನಗು ಹಾಗೂ ಸಂತೋಷ ತರುವಲ್ಲಿ ಕಂಪನಿಯ ನೌಕರರು ಸಫಲರಾಗಿದ್ದಾರೆ .
ಅದೇ ರೀತಿ ದಿನಾಂಕ 11 ರಂದು ಸುಬ್ಬಯ್ಯ ಆಸ್ಪತ್ರೆಯ ಸಿಬ್ಬಂದಿಗಳಿಂದ ಮಹಾಂತ ಮಹೇಂದ್ರ ಮೋಟರ್ಸ್ ನಲ್ಲಿ ಬ್ಲಡ್ ಡೊನೇಷನ್ ಕ್ಯಾಂಪನ್ನು ಕೂಡ ನಡೆಸಲಾಯಿತು.
ಕಾರ್ಪೊರೇಟ್ ಕಂಪನಿಗಳು ಇನ್ನೂ ಹೆಚ್ಚೆಚ್ಚು ಇಂಥ ಸಾಮಾಜಿಕ ಬದ್ಧತಾ ಕಾರ್ಯಗಳಲ್ಲಿ ಭಾಗವಹಿಸಿ ಉತ್ತಮ ಸಮಾಜವನ್ನು ಬೆಳೆಸುವಲ್ಲಿ ಸಹಾಯ ಮಾಡಲಿ ಎಂದು ಆಶಿಸುತ್ತಾ
ಟೀಮ್ ಪ್ರಜಾಶಕ್ತಿ…