
ಶಿವಮೊಗ್ಗ: ಸಮಾಜದಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಜಿ.ವಿಜಯ್ಕುಮಾರ್ ಅವರಿಗೆ ‘ರಾಜ್ಯಮಟ್ಟದ ಸಹೃದಯ ಸಂಘಟಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಗರದ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಸಹೃದಯ ಬಳಗ, ಸಾಗರ ಸುತ್ತ ಹಾಗೂ ತಾಲೂಕು ಇತಿಹಾಸ ವೇದಿಕೆ ಸಾಗರ ಸಂಸ್ಥೆ ವತಿಯಿಂದ ಆಯೋಜಿಸಿದ್ದ 21ನೇ ವರ್ಷದ ಸಾಗರೋತ್ಸವ 2022 ರಾಜ್ಯಮಟ್ಟದ ಸಹೃದಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.ಜಿ.ವಿಜಯ್ಕುಮಾರ್ ಅವರು ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರೋಟರಿ ಸಹಾಯಕ ಗವರ್ನರ್, ವಾಣಿಜ್ಯ ಸಂಘದ ಸಹ ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಸೈಕಲ್ನಲ್ಲಿ ಗಿನ್ನೆಸ್ ದಾಖಲೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನೇಕ ಬಾರಿ ರಕ್ತದಾನ ಮಾಡಿದ್ದಾರೆ. ರಾಜಗುರು ಕೆಳದಿ ಹಿರೇಮಠ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ಡಾ. ರಾಜನಂದಿನಿ ಕಾಗೋಡು, ಸಹೃದಯ ಬಳಗದ ಅಧ್ಯಕ್ಷ ಜಿ.ನಾಗೇಶ್, ಸಿ.ಎಂ.ಎನ್.ಶಾಸ್ತಿç, ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ್, ವೆಂಕಟೇಶ್ ಜೋಯ್ಸ್, ಚೇತನ್ರಾಜ್ ಕಣ್ಣೂರು, ವಿ.ಮಹೇಶ್, ಲಲಿತಮ್ಮ, ಶ್ರೀನಿವಾಸ್, ಕೆ.ಎಚ್.ಜ್ಞಾನೇಶ್ವರ್, ಜಿ.ಪರಮೇಶ್ವರಪ್ಪ, ಗಣಪತಿಯಪ್ಪ, ಸುನಿಲ್, ಜಯರಾಮ್ ಮತ್ತಿತರರು ಇದ್ದರು.