ಕಾಂಗ್ರೆಸ್ ಹಾಗೂ ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಖಾಸಗಿ ಆಡಳಿತ ಮಂಡಳಿ ವಿರುದ್ಧ ಮನವಿ ನೀಡಿ ಪ್ರತಿಭಟಿಸಲಾಯಿತು. ಕಳೆದ ವರ್ಷವೂ ಲಾಕ್ ಡೌನ್ ಯಿಂದಾಗಿ ಕಾಲೇಜು ಸರಿಯಾಗಿ ನಡೆದಿದ್ದರೂ ಕೂಡ ಖಾಸಗಿ ಶಾಲಾ ಕಾಲೇಜುಗಳು ಪೋಷಕರಿಂದ ಡೊನೇಶನ್ ಶಾಲಾ ಕಟ್ಟಡ ಧನಸಹಾಯ ಲೈಬ್ರರಿ ಶುಲ್ಕ ಕ್ರೀಡಾ ಶುಲ್ಕ ಬೋಧನಾ ಶುಲ್ಕ ವೈದ್ಯಕೀಯ ಪರೀಕ್ಷಾ ಶುಲ್ಕ ಪಠ್ಯೇತರ ಚಟುವಟಿಕೆ ಶುಲ್ಕ ಶಿಕ್ಷಕರ ದಿನಾಚರಣೆ ಶುಲ್ಕ ಯೂನಿಫಾರ್ಮ್ ಪುಸ್ತಕ ಹೀಗೆ ಹಲವಾರು ಕಾರಣ ಒಡ್ಡಿ ಪೋಷಕರಿಂದ ಹಣ ವಸೂಲಿ ಮಾಡಿದ್ದರು.
ಈ ವರ್ಷವೂ ಶಾಲಾ ಕಾಲೇಜುಗಳು ನಡೆದಿದ್ದರೂ ಕೂಡ ಡೊನೇಷನ್ ಹೆಸರಿನಲ್ಲಿ ಹಾಗೂ ಇತರ ಕಾರಣಗಳನ್ನು ನೀಡಿ ಶಾಲಾ ಕಾಲೇಜು ಮಂಡಳಿಗಳು ಪೋಷಕರನ್ನು ಬೆದರಿಸಿ ಪೋಷಕರ ಸಂಕಷ್ಟದಲ್ಲಿ ಚೆಲ್ಲಾಟವಾಡುತ್ತಾ ಶುಲ್ಕದ ಹೆಸರಿನಲ್ಲಿ ಪೋಷಕರ ರಕ್ತಹೀರುವ ಕೆಲಸವನ್ನು ಮಾಡುತ್ತಿವೆ. ಈಗ ಆಡಳಿತ ಮಂಡಳಿಗಳು ಡೊನೇಷನ್ ಪಾವತಿ ಮಾಡಿ ಇಲ್ಲದಿದ್ದರೆ ನಿಮ್ಮ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಿ ಅವರಿಗೆ ತಿಳಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ಬೆದರಿಸುತ್ತಾರೆ ಈ ಕೂಡಲೇ ಸರ್ಕಾರವು ಮಧ್ಯ ಪ್ರವೇಶಿಸಿ ಶಿಕ್ಷಣ ಸಂಸ್ಥೆಗಳ ಮೇಲೆ ಕೇಸ್ ದಾಖಲಿಸಿ ಬೆದರಿಸುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಮಾಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವಿಂದ್ರಪ್ಪ, ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಕವಿತ ರಾಘವೇಂದ್ರ , ಡಿಕೆಎಸ್ ಬ್ರಿಗೇಡ್ ನ ಮುಖ್ಯಸ್ಥರಾದ ರಾಘವೇಂದ್ರ ಬೀಸಿ , ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅರ್ಜುನ್ , ವಿದ್ಯಾರ್ಥಿ ಕಾಂಗ್ರೆಸ್ ಮುಖಂಡ ನಿಹಾಲ್ ಸಿಂಗ್, ಭರತ್ T ಉಪಸ್ಥಿತರಿದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153