ಶಿವಮೊಗ್ಗ: ಮಹಾನ್ ದಾರ್ಶನಿಕ, ಶ್ರೇಷ್ಟ ಸಮಾಜ ಸುಧಾರಕ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಆಚರಿಸಲಾಯಿತು.

ಸಂಸದ ಬಿ.ವೈ. ರಾಘವೇಂದ್ರ ಅವರು ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸೇವಾಲಾಲರ ತತ್ವ ಹಾಗೂ ಜೀವನ ಸಂದೇಶದಿಂದ ನಾವೆಲ್ಲರೂ ಪ್ರೇರಣೆ ಪಡೆಯೋಣ. ಮತ್ತು ಅವರ ಮಾರ್ಗದರ್ಶನದಂತೆ ಜೀವನದಲ್ಲಿ ಮುನ್ನಡೆಯೋಣ ಎಂದರು.ಸಮಾಜ ಸುಧಾರಣೆಯಲ್ಲಿ ಸೇವಾಲಾಲ್ ಮಹಾರಾಜರ ಪಾತ್ರ ಮಹತ್ವದ್ದಾಗಿದೆ. ಅವರ ಸಂದೇಶಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಆದರ್ಶ ಪಾಲಿಸೋಣ ಎಂದರು.

ಈ ಸಂದರ್ಭದಲ್ಲಿ ಸಾಲೂರು ಮಠದ ಸೈನಾಭಗತ್ ಸ್ವಾಮೀಜಿ, ಆಯನೂರು ಶಿವಾನಾಯ್ಕ್, ಪ್ರಮುಖರಾದ ನಾನ್ಯಾನಾಯ್ಕ್, ಕುಮಾರ್ ನಾಯ್ಕ್, ಭೋಜ್ಯಾನಾಯ್ಕ್, ಹಾಲಾ ನಾಯ್ಕ್, ನಾಗಾ ನಾಯ್ಕ್, ಮತ್ತು ಮೇಯರ್ ಸುನಿತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ನಾಗರಾಜ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಎಲ್. ಷಡಾಕ್ಷರಿ, ಎಸ್.ಎನ್. ಚನ್ನಬಸಪ್ಪ, ಜ್ಞಾನೇಶ್ವರ್, ಬಳ್ಳೆಕೆರೆ ಸಂತೋಷ್, ಮಾಲತೇಶ್, ರಾಜೇಶ್ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಹಾಯಕ ನಿರ್ದೇಶಕ ಉಮೇಶ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…