ಶಿವಮೊಗ್ಗ: ಪ್ರತಿ ವರ್ಷ ಬರುವ ರಥಸಪ್ತಮಿಯಂದು ಭಗವಾನ್ ಶ್ರೀ ಸೂರ್ಯನಾರಾಯಣ ಸ್ವಾಮಿ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕೆಂದು ಒತ್ತಾಯಿಸಿ ಸುವರ್ಣ ಕರ್ನಾಟಕ ಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ ಸಮಾಜ ವತಿಯಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.

ರಾಜ್ಯದಲ್ಲಿ ಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ ಸಮುದಾಯದ ಕುಲದೇವರಾದ ಭಗವಾನ್ ಶ್ರೀ ಸೂರ್ಯನಾರಾಯಣ ಸ್ವಾಮಿ ಜಯಂತಿಯನ್ನು ಪ್ರತಿವರ್ಷ ರಥ ಸಪ್ತಮಿಯಂದು ನಮ್ಮ ಸಮುದಾಯವು ಪ್ರತಿಯೊಂದು ಗ್ರಾಮ, ಜಿಲ್ಲೆಗಳಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ರಾಜ್ಯ ಸರ್ಕಾರ ಬಸವ, ಕನಕ, ವಾಲ್ಮೀಕಿ, ಶಿವಾಜಿ ಜಯಂತಿ ಆಚರಿಸಿದಂತೆ ಭಗವಾನ್ ಶ್ರೀ ಸೂರ್ಯನಾರಾಯಣ ಸ್ವಾಮಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುವಂತೆ ಆದೇಶಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಮಿತಿಯ ಸಲಹಾ ಸಮಿತಿ ಸದಸ್ಯ ಕೆ. ಯಲ್ಲಪ್ಪ ಮಹೇಂದ್ರಕರ್, ದೇವರಾಜ್ ಕಲಾಲ್, ರಾಘವೇಂದ್ರ ಭುಜೂರ್ಕರ್, ಸುಶೀಲ್ ಪತ್ತೇಪುರಿ, ಮದನ್ ಕಲಾಲ್, ಸಂತೋಷ್ ಅಂಕೂಶ್ಕರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…