ಭಾರತ ಗ್ರಾಮೀಣ ಸೊಗಡಿನ ದೇಶ. ನಮ್ಮಲ್ಲಿ ಇರುವಷ್ಟು ಸಂಸ್ಕೃತಿ ಬೇರೆ ಎಲ್ಲೂ ಇಲ್ಲ ಅದನ್ನು ಉಳಿಸಿ ಬೆಳೆಸ ಬೇಕಾದ ಜವಾಬ್ದಾರಿ ಮುಂದಿನ ಪ್ರಜೆಗಳಾದ ತಮ್ಮ ಮೇಲಿದೆ ಎಂದು ಸಹ್ಯಾದ್ರಿ ಕಾಲೇಜಿನ ಎನ್.ಎಸ್.ಎಸ್.ಕ್ಯಾಂಪ್ ಶಿಬಿರಾಧಿಕಾರಿ ಕೊನಗವಳ್ಳಿಯಲ್ಲಿ ಆಯೋಜಿಸಿರುವ ಡಾ.ಹಾಲಮ್ಮನವರು ವೈಹೆಚ್ ಐಎ ತರುಣೋದಯ ಘಟಕ ನಡೆಸಿದ ‘ಜಾನಪದ ಆಟೋಟಗಳ ಪ್ರಾತ್ಯಕ್ಷತೆ ಮತ್ತು ಮಹತ್ವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದುನಿಕತೆಯ ಭರದಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವುದು ವಿಷಾದನೀಯ. ನಮ್ಮ ದೇಶ ಹಳ್ಳಿಗಳ ದೇಶ, ಎಲ್ಲಾ ಭಾಗ ಗಳಲ್ಲಿಯೂ ಅದರದೇ ಆದ ಆಟ, ಊಟ, ವಸ್ತ್ರ ವಿನ್ಯಾಸಗಳ ವ್ಯಶಿಷ್ಟ್ಯ ಹೊಂದಿದೆ. ಅವುಗಳನ್ನು ತಿಳಿದು ಕೊಂಡು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನತೆಯದ್ದಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ತರುಣೋದಯ ಘಟಕದ ಸಂಸ್ಥಾಪಕ ಆ.ನಾ.ವಿಜಯೇಂದ್ರ ರವರು, ನಾವು ಚಿಕ್ಕವರಿದ್ದಾಗ ಆಟವಾಡಿದ್ದನ್ನು ನಾವು ಮರೆತಿಲ್ಲ. ತಮಗೂ ಗೊತ್ತಿರಬಹುದು ಆದರೆ ಆಟವಾಡಲು ಅವಕಾಶ ದೊರಕದೇ ಇರಬಹುದು ಇಂತಹಾ ಶಿಬಿರಗಳಲ್ಲಿ ಕಲಿತು, ಸಮಯ ಸಿಕ್ಕಾಗ ಇತರರಿಗೂ ಕಲಿಸಬೇಕಾದು ಎಲ್ಲರ ಕರ್ತವ್ಯ ಎಂದರು.

ವೈಹೆಚ್ ಐಎ ಛೇರ್ಮನ್ ಎಸ್.ಎಸ್.ವಾಗೇಶ್ ಮಾತನಾಡಿ ಇಂದು ಪ್ರಾತ್ಯಕ್ಷತೆ ಮೂಲಕ ಹಲವು ಗ್ರಾಮೀಣ ಕ್ರೀಡಗಳಾದ ಆರೋಗ್ಯಕ್ಕಾಗಿ ನಡಿಗೆ, ಹಗ್ಗ ಜಗ್ಗಾಟ, ಚಲಿಸುವ ಚಂಡು, ಹುಲಿ-ಬೋನು, ಗೋಣಿಚೀಲ ನಡಿಗೆ, ಎರಡೆತ್ತು ಒಂದು ಬಂಡಿ, ಮೂರು ಕಾಲಿನ ಓಟ ಹೀಗೆ ಹಲವಾರು ಆಟಗಳನ್ನು ತ್ತೋರಿಸುತ್ತೇವೆ. ಅದನ್ನು ತಾವೆಲ್ಲರೂ ಮರೆಯದೆ, ಸಮಯ ಸಿಕ್ಕಾಗ ಎಲ್ಲರಿಗೂ ಬೇರೆಡೆ ಆಟವಾಡಿಸಿ, ಗ್ರಾಮೀಣ ಕ್ರೀಡೆಯಿಂದ ದೇಹಕ್ಕೆ ಕಸುವು ಮತ್ತು ಉತ್ತಮ ಆರೋಗ್ಯ ದೊರಕುತ್ತದೆ ಎಂದು ತಿಳಿಸಿ ಆಡಿಸಿ, ಇದೇ ತಾವು ಉಳಿಸಿ ಬೆಳೆಸುವ ಪರಿ ಎಂದರು.
ಜಾನಪದ ಗೀತೆಯ ಮೂಲಕ ಅಂದಿನ ಉಡಿಗೆ ತೊಡುಗೆ, ಆಹಾರ ಪದ್ದತಿ ಬಗ್ಗೆ ತಿಳಿಸಿದ ಜಿ.ವಿಜಯಕುಮಾರ್ ಭರ್ಗರ್ ಯುಗದಲ್ಲಿ ಹಿಂದಿನ ಆರೋಗ್ಯ ಪೂರ್ಣ ಆಹಾರಗಳನ್ನು ಒಮ್ಮೆಯಾದರು ರುಚಿ ನೋಡಲೆಂದು, ಅನಕ್ಷರಸ್ಥ ಗ್ರಾಮೀಣ ಸೊಗಡಿನ ರೀತಿಯಲ್ಲಿ ಹಾಡಿರುವ ಯುಗಧರ್ಮ ರಾಮಣ್ಣ ರವರು ಇಂದಿನ ಸಮಕಾಲಿನವರು ಅವರ ಲಾವಣಿಗಳಲ್ಲಿರುವ ಸೋಗಡನ್ನು ಅರಿತು ಬಾಳಿದರೆ ನಮ್ಮ ಸಂಸ್ಕೃತಿ ಉಳಿಸಿ ಬೇಳೆಸಲು ಸಾದ್ಯ ಎಂದರು.

ಸ್ವಯಂ ಸೇವಕರು, ಕೊನಗವಳ್ಳಿ ಗ್ರಾಮಸ್ಥರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಬಿಂದು ವಿಜಯಕುಮಾರ್ ನಡೆಸಿ ಕೊಟ್ಟರು ಸ್ವಾಗತವನ್ನು ಪವನ್ ಕುಮಾರ್, ವಂದರ್ನಾಪಣೆಯನ್ನು ಮಲ್ಲಿಕಾರ್ಜುನ್ ಕಾನೂರು ನೆರವೇರಿಸಿದರು.

ವರದಿ ಮಂಜುನಾಥ್ ಶೆಟ್ಟಿ…