ಇಂದು ಮುಖ್ಯಮಂತ್ರಿಗಳ ಸ್ವ ಕ್ಷೇತ್ರವಾದ ಶಿಕಾರಿಪುರದಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಾನ್ಯ ಮುಖ್ಯಮಂತ್ರಿಗಳು ವಹಿಸಿದ್ದರು ಈ ಸಂದರ್ಭದಲ್ಲಿ ನಗರಾಭಿವದ್ಧಿ ಸಚಿವ ಬೈರತಿ ಬಸವರಾಜು ಲೋಕಸಭಾ ಸದಸ್ಯರಾದ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳು ಟಿಎಚ್ ಒ ಇಂದ ಶಿಕಾರಿಪುರದ ಕರೋನ ಸ್ಥಿತಿಗತಿ ವರದಿಯನ್ನು ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಟಿಎಚ್ ಒ ಶಿಕಾರಿಪುರದಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಒಂದೂ ಮರಣ ಸಂಭವಿಸಿಲ್ಲ ತಾಲ್ಲೂಕಿನಲ್ಲಿ ಕೆಲವು ಜಾತ್ರೆಯಿಂದಾಗಿ ಪರಿಸ್ಥಿತಿ ಕೈ ಮೀರಿತ್ತು ಆದರೆ ಎಲ್ಲರ ಸಹಕಾರದಿಂದಾಗಿ ಈಗ ಹತೋಟಿಯಲ್ಲಿದೆ ಎಂದು ತಿಳಿಸಿದರು.
ಶಿಕಾರಿಪುರದಲ್ಲಿ ಎರಡನೆಯ ಅಲೆಯಲ್ಲಿ ಈವರೆಗೂ ಐವತ್ತು ಸಾವುಗಳು ಸಂಭವಿಸಿವೆ ಎಂದು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರರವರು ಎರಡನೇ ಡೋಸ್ ಲಸಿಕೆ ಕೇವಲ 5 ಸಾವಿರ ಜನರಿಗೆ ಮಾತ್ರ ಆಗಿದೆ ಹಾಗಾಗಿ ಲಸಿಕಾಕರಣದ ವೇಗ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೆ ಕೋವಿಡ್ ನಿಂದ ಆಗುತ್ತಿರುವ ಮರಣದ ಸಂಖ್ಯೆಯನ್ನು ಕಡಿಮೆ ಗೊಳಿಸಬೇಕು ಎಂದು ಹೇಳಿದರು.
ಇದಾದ ನಂತರ ಜಿಲ್ಲಾಧಿಕಾರಿಗಳು ಫಲಾನುಭವಿಗಳಿಗೆ ವಿತರಿಸಿದ ಪರಿಹಾರದ ವಿವರ ನೀಡಿದರು. ಮುಖ್ಯಮಂತ್ರಿಗಳು ವಿಶೇಷ ಕಾಳಜಿಯಿಂದ ಕೃಷಿ ಸಾಲದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರು . ಶಿಕಾರಿಪುರದ ವಿವಿಧ ನೀರಾವರಿ ಯೋಜನೆಯ ಮಾಹಿತಿ ನೀಡಲಾಯ್ತು ಮುಖ್ಯಮಂತ್ರಿಗಳು ಹಣದ ಕೊರತೆ ಇದೆಯೇ ಎಂದು ಕೇಳಿದಾಗ ಅಧಿಕಾರಿಗಳು ಇಲ್ಲ ಎಂದು ಸಭೆಗೆ ತಿಳಿಸಿದರು. ಮತ್ತೊಮ್ಮೆ ಮುಖ್ಯಮಂತ್ರಿಗಳು ಕರೋನ ಬಗ್ಗೆ ತೀವ್ರ ನಿಗಾ ವಹಿಸುವಂತೆ ಎಲ್ಲರಿಗೂ ಕಿವಿಮಾತು ಹೇಳಿದರು .
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153