ಕೋಲಾರ : ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಯಲ್ಲಿ 2004 ರಲ್ಲಿ ಆಶ್ರಯ ಸಮಿತಿ ಯೋಜನೆ ಅಡಿಯಲ್ಲಿ ಮಾಲೂರು ಪುರಸಭೆ ಇಲಾಖೆ ನಿವೇಶನಗಳನ್ನು ಹಂಚುವುದಾಗಿ ಪ್ರಕಟಣೆ ಹೊರಡಿಸಿತ್ತು .ಆ ಪ್ರಕಟಣೆಯ ಪ್ರಕಾರ ಮಾಲೂರು ಪಟ್ಟಣದ ನಿವಾಸಿಗಳು ಆಶ್ರಯ ಸಮಿತಿ ವಸತಿಗಾಗಿ 2004ರಲ್ಲಿ sc st ಗೆ 2500 ಹಾಗೂ ಇತರೆ ಜನಾಂಗದವರಿಗೆ 5000 ರೂ ಗಳನ್ನು ಪುರಸಭೆ ಅಧಿಕಾರಿಗಳ ಹೆಸರಿನಲ್ಲಿ ಠೇವಣಿ ಮಾಡಿಸಿಕೊಂಡಿದ್ದಾರೆ.

ಮತ್ತೆ ಫಲಾನುಭವಿಗಳಿಂದ 35000 ರೂಪಾಯಿಗಳನ್ನು ಠೇವಣಿ ಮಾಡಿಸಿಕೊಂಡು ಇಪ್ಪತ್ತೊಂದು ವರ್ಷ ಕಳೆದರೂ ನಿವೇಶನ ಗಳನ್ನು ಹಂಚಿಕೆ ಮಾಡದೆ ವಂಚನೆ ಮಾಡಿದೆ ಎಂದು ಪ್ರತಿಭಟನೆ ಸಂದರ್ಭ ಜಯಕರ್ನಾಟಕ ಸಂಘಟನೆ ಆಲೂರು ತಾಲ್ಲೂಕು ಅಧ್ಯಕ್ಷರದ ದಿನೇಶ್ ಗೌಡರವರು ಪತ್ರಿಕೆಗೆ ತಿಳಿಸಿದರು . ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ …