ಬೆಂಗಳೂರು ಫೆಬ್ರವರಿ 22: ಬೆಂಗಳೂರು ವಿಶ್ವವಿದ್ಯಾಲಯದ 56 ನೇ ಅಂತರ ಕಾಲೇಜು ಕ್ರೀಡಾ ಕೂಟದಲ್ಲಿ ಪುರುಷರ ವಿಭಾಗದ ಟ್ರಿಪ್ಪಲ್‌ ಜಂಪ್‌ ನಲ್ಲಿ ಬಂಗಾರದ ಪದಕ ಗೆದ್ದಿರುವ ಕುಂಬಳಗೋಡಿನ ಡಾನ್‌ ಬಾಸ್ಕೋ ಇನ್ಸಿಟ್ಯೂಟ್‌ ನ ಬಿ.ಬಿ.ಎ ವಿದ್ಯಾರ್ಥಿ ಟಿ ಆರ್‌ ಚಂದ್ರಶೇಖರ್‌ ಅವರನ್ನು ಕಾಲೇಜಿನ ಮಂಡಳಿಯ ವತಿಯಿಂದ ಇಂದು ಸನ್ಮಾನಿಸಲಾಯಿತು.

ಕರೋನಾ ಕಾರಣದಿಂದಾಗಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುವಿಗೆ ಕಾಲೇಜಿನ ವತಿಯಿಂದ ಸನ್ಮಾನ ಮಾಡಲಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಇಂದು ಕಾಲೇಜಿನ ವಿದ್ಯಾರ್ಥಿ ಕ್ರೀಡಾಪಟು ಟಿ ಆರ್‌ ಚಂದ್ರಶೇಖರ್‌ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಜನೆಯ ಜೊತೆಯಲ್ಲೇ ಕ್ರೀಡೆಯಲ್ಲೂ ಅತ್ಯುತ್ತಮ ಸಾಧನೆ ತೋರಿಸುತ್ತಿರುವ ಚಂದ್ರಶೇಖರ್‌ ಇತರೆ ವಿದ್ಯಾರ್ಥಿಗಳಿಗೂ ಆದರ್ಶಪ್ರಾಯ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ರಾಘವ ಬೈಲಪ್ಪ ತಿಳಿಸಿದರು.

ಈ ಸಂಧರ್ಭದಲ್ಲಿ ನಿರ್ದೇಶಕರು ಅಕ್ಯಾಡೆಮಿಕ್ಸ್‌ ಡಾ. ಹಾಲಾ ನಾಯ್ಕ್‌ ಎನ್‌, ಟ್ರೈನಿಂಗ್‌ ಮತ್ತು ಪ್ಲೇಸ್‌ಮೆಂಟ್‌ ಆಫೀಸರ್‌ ಪ್ರೋ. ಸೋಮಶೇಖರ್‌, ಫಿಸಿಕಲ್‌ ಎಜುಕೇಶನ್‌ ನಿರ್ದೇಶಕರಾದ ರುದ್ರೇಶ್‌ ಕೆ. ಆರ್‌ ಉಪಸ್ಥಿತರಿದ್ದರು. ಅಧ್ಯಕ್ಷರಾದ ಬಿ, ಬೈಲಪ್ಪ, ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ. ಮಂಜುನಾಥ್‌ ಭೋದಕ ಮತ್ತು ಭೋದಕೇತರ ವರ್ಗದವರು ಅಭಿನಂದಿಸಿದರು.

ವರದಿ ಹರೀಶ ಶೆಟ್ಟಿ ಬೆಂಗಳೂರು…