ಕೋವಿಡ್ ಸಂಕಷ್ಟದಲ್ಲಿರುವ ಕುಂಬಾರ ಸಮುದಾಯದವರಿಗೆ ಕುಂಭ ಕಲಾ ಅಭಿವೃದ್ಧಿ ಮಂಡಳಿ ಮತ್ತು ದೇವರಾಜ ಅರಸು ನಿಗಮವತಿಯಿಂದ ಆಹಾರ ಸಾಮಾಗ್ರಿಗಳನ್ನು ಮತ್ತು ಕೋವಿಡ್v ಸುರಕ್ಷತಾ ಕಿಟ್ ವಿತರಿಸಬೇಕೆಂದು ಕರ್ನಾಟಕ ಕುಂಬಾರರ ಯುವ ಸೈನ್ಯ (ರಿ) ಬೆಂಗಳೂರು ಸಂಘಟನೆಯ ರಾಜ್ಯಾಧ್ಯಕ್ಷರು ಶಂಕರ ಶೆಟ್ಟಿ ಕುಂಬಾರ ಮತ್ತು ಕಾರ್ಯಧ್ಯಕ್ಷರಾದ ರಾಜಶೇಖರ ಕುಂಬಾರ ಹಾಗೂ ಪದಾಧಿಕಾರಿಗಳ ಒತ್ತಾಯ.


ಕುಂಬಾರ ಸಮಾಜದ ವೃತ್ತಿ ನಿರತರ ಜೀವ ರಕ್ಷಣೆಗಾಗಿ ಕೋವಿಡ್ ಸಂಬಂದ ಔಷಧಿ ಮತ್ತು ವೈದ್ಯಕೀಯ ಪರಿಕರಗಳು ಒಳಗೊಂಡಿರುವ ಕೋವಿಡ್ ಸುರಕ್ಷಾ ಕಿಟ್ ಹಾಗೂ ಸಂಕಷ್ಟದಲ್ಲಿ ಸಿಲುಕಿರುವ ಕುಂಬಾರರಿಗೆ ಆಹಾರ ಸಾಮಾಗ್ರಿಗಳ ಜೊತೆಗೆ ಕುಂಬಾರ ಬೀದಿಯಲ್ಲಿ ವಾಸಿಸುವ ಜನರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಮೊಬೈಲ್ ಕ್ಲಿನಿಕ್ ವ್ಯವಸ್ಥೆಯನ್ನು ಮತ್ತು ರೋಗ ನಿರೋಧಕ ವೃದ್ಧಿಗೆ ಇಮ್ಯುನಿಟಿ ಬೂಷ್ಟರ್ ನೀಡಬೇಕೆಂದು ಆಗ್ರಹಿಸಿದ್ದಾರೆ
ಕೋವಿಡ್ ಲಾಕ್ ಡೌನ್ ಪರಿಣಾಮ ಕುಂಬಾರ ಸಮುದಾಯಕ್ಕೆ ಸಂಕಷ್ಟ ಎದುರಾಗಿದೆ ಈ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಾದ ಕುಂಭ ಕಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ನಾಪತ್ತೆಯಾಗಿದ್ದಾರೆ. ಇವರು ಕುಂಬಾರರ ಸಂಕಷ್ಟದ ಸಂದರ್ಭ ಸಮಯದಲ್ಲಿ ಕುಂಭಕಲಾ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಸೌಲಭ್ಯ ದೊರಕಿಸಿ ಕೊಡಲಿಲ್ಲವೆಂದು ಸಂಕಷ್ಟದಲ್ಲಿರುವ ಕುಂಬಾರರ ಅಳಲಾಗಿದೆ.


ಕುಂಭ ಕಲಾ ಅಭಿವೃದ್ಧಿ ಮಂಡಳಿ ಮತ್ತು ದೇವರಾಜು ಅರಸು ನಿಗಮದ ಅಧ್ಯಕ್ಷರು ಮತ್ತು ಸದಸ್ಯರುಗಳು ಈ ಬಗ್ಗೆಯ ಯೋಜನೆಯ ಕಾರ್ಯಕ್ರಮವನ್ನು ತಕ್ಷಣ ರೂಪಿಸಿ ಜಾರಿಗೆ ತಂದು ಕುಂಬಾರ ಜನತೆಯ ಜೀವಕ್ಕೆ ಸಹಕಾರಿಯಾಗಿ ಅವರ ಹಸಿವು ನೀಗಿಸಲು ಆಹಾರ ಸಾಮಾಗ್ರಿಗಳು ಮತ್ತು ಜೀವ ರಕ್ಷಣೆಗೆ ಸುರಕ್ಷಾ ಕಿಟ್ ಕಾಳಜಿಯಿಂದ ವಿತರಿಸಿ ಮಾನವೀಯತೆಯ ಕಾರ್ಯ ಮಾಡಿ ಸಂಕಷ್ಟದಲ್ಲಿರುವ ಕುಂಬಾರರಿಗೆ ನೆರವಾಗಬೇಕೆಂದು ಕುಂಭಕಲಾ ಅಭಿವೃದ್ಧಿ ಮಂಡಳಿ ಮತ್ತು ದೇವರಾಜ ಅರಸು ನಿಗಮ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರುಗಳಲ್ಲಿ ಕರ್ನಾಟಕ ಕುಂಬಾರರ ಯುವ ಸೈನ್ಯ (ರಿ) ಬೆಂಗಳೂರು ಸಂಘಟನೆಯ ರಾಜ್ಯಾಧ್ಯಕ್ಷರು ಶಂಕರ ಶೆಟ್ಟಿ ಕುಂಬಾರ ಮತ್ತು ಕಾರ್ಯಧ್ಯಕ್ಷರಾದ ರಾಜಶೇಖರ ಕುಂಬಾರ ಹಾಗೂ ಪದಾಧಿಕಾರಿಗಳು ಕೋರಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153

One thought on “ಕುಂಭ ಕಲಾ ಅಭಿವೃದ್ಧಿ ಮಂಡಳಿ ಮತ್ತು ದೇವರಾಜ ಅರಸು ನಿಗಮವತಿಯಿಂದ ಕುಂಬಾರರಿಗೆ ಫುಡ್ ಕಿಟ್ ನೀಡಬೇಕೆಂದು ಕರ್ನಾಟಕ ಕುಂಬಾರರ ಯುವ ಸೇನೆ ಆಗ್ರಹ…”

Comments are closed.