ಪ್ರಕೃತಿ ಸೌಂದರ್ಯ ಸವಿಯಲು ಎಲ್ಲಾ ಪ್ರದೇಶಗಳನ್ನು ನಡೆದು ಸವಿಯಬೇಕು ಎಂದು ತರುಣೋದಯ ಘಟಕ ಆಯೋಜಿಸಿರುವ ಗೋಕರ್ಣ ಬೀಚ್ ಟ್ರಕ್ಕಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಛೇರ್ಮನ್ ಎಸ್.ಎಸ್.ವಾಗೇಶ್ ನುಡಿದರು.
ಚಳಿಗಾಲದ ಕೊನೆ ದಿನಗಳಾಗಿರುವುದಿಂದ ಸಮುದ್ರ ತಟದಲ್ಲಿ ಈ ಚಾರಣ ಹಮ್ಮಿ ಕೊಳ್ಳಲಾಗಿದೆ. ಚಾರಣ ಎಂದರೆ ಬರೀ ಬೆಟ್ಟ ಗುಡ್ಡಗಳನ್ನು ಹತ್ತುವುದಷ್ಟೇ ಅಲ್ಲ, ಭೂಮಿಯ ಮೇಲಿರುವ ಎಲ್ಲಾ ಫ್ರಕೃತಿ ಸೌಂದರ್ಯ ಸವಿಯಲು ವಾಹನಗಳಲ್ಲಿ ಹೋಗಲು ಸಾದ್ಯವೇಇಲ್ಲ ಅಂತಹ ಕಡೆಗೆ ಕಾಲ್ನಡಿಗೆಯಲ್ಲಿ ಹೋಗಿ ನೋಡಿ ಆನಂದಿಸ ಬೇಕು.
ಹಿಮಾಲಯದಿಂದ ಸಮುದ್ರದ ತಳ ಭಾಗದ ವರೆವಿಗೂ ಅದ್ಭುತ ಸೌಂದರ್ಯವಿದೆ ಅವುಗಳನ್ನು ಹತ್ತಿರ ದಿಂದ ನೋಡಿ ಅನುಭವಿಸಿದವರಿಗೆ ಅದರ ಸವಿ ಗೊತ್ತು ಅದನ್ನು ವರ್ಣಿಸಲು ಅಸಾದ್ಯ ಎಂದರು.
ಈ ರೀತಿಯ ಕಾರ್ಯಕ್ರಮಗಳನ್ನು ಯೂತ್ ಹಾಸ್ಟೆಲ್ಸ್ ವಿಶ್ವಾದ್ಯಂತ ವರ್ಷ ಪೂರ್ತಿ ಹಮ್ಮಿ ಕೊಳ್ಳುತ್ತದೆ. ಆಸಕ್ತರು ಅಜೀವ ಸದಸ್ಯತ್ವ ಹೊಂದಿ ಇದರ ಪ್ರಯೋಜನವನ್ನು ಅತ್ಯಂತ ಕಡಿಮೆ ವೆಚ್ಛದಲ್ಲಿ ಪಡೆಯಬಹುದಾಗಿದೆ ಎಂದರು.
ಭಾರತಿ ಗುರುಪಾದಪ್ಪ ಸ್ವಾಗತಿಸಿದರು ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು.