ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ 20-02-2022 ರಂದು ಆಯೋಜಿಸಲಾಗಿದ್ದ “ಕನ್ನಡ ನುಡಿ ವೈಭವ”-೨೦೨೨ ಎಂಬ ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಾಧ ಸಾಧನೆಗೈದಿರುವ ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯರಾಗಿರುವ ಕೆ ದೇವಂದ್ರಪ್ಪ ಇವರಿಗೆ ರಾಜ್ಯಮಟ್ಟದ ಗುರು “ಶ್ರೇಷ್ಠ ಪ್ರಶಸ್ತಿ” ಯನ್ನು ಘೋಷಿಸಲಾಗಿತ್ತು .

ಆದರೆ ಕಾರಣಾಂತರಗಳಿಂದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಗವಿಸಿದ್ದೇಶ್ವರ ಮಠದಲ್ಲಿ ನಡೆದ ರಾಜ್ಯ ಮಟ್ಟದ “ಕನ್ನಡ ನುಡಿ ವೈಭವ -2022” ಕಾರ್ಯಕ್ರಮಕ್ಕೆ ಕೆ ದೇವೆಂದ್ರಪ್ಪನವರು ಪಾಲ್ಗೊಳ್ಳದೇ ಇದ್ದ ಕಾರಣ ಸೋಮವಾರ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ರಫ಼ಿ ರಿಪ್ಪನ್ ಪೇಟೆ ರವರು ಬಿದರಹಳ್ಳಿಯ ಸರ್ಕಾರಿ ಶಾಲೆಗೆ ತೆರಳಿ “ಗುರು ಶ್ರೇಷ್ಠ” ಕೆ ದೇವೆಂದ್ರಪ್ಪ ರವರಿಗೆ ಗೌರವಿಸಿ ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ರಾಜ್ಯ ಬರಹಗಾರರ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ರಫ಼ಿ ರಿಪ್ಪನ್ ಪೇಟೆ ಪ್ರತಿ ವರ್ಷ ಬರಹಗಾರರ ಸಂಘದ ವತಿಯಿಂದ ರಾಜ್ಯಾದ್ಯಂತ ಉತ್ತಮ ಶಿಕ್ಷಕರನ್ನು ಗುರುತಿಸಿ “ಗುರುಶ್ರೇಷ್ಟ” ಎಂಬ ಬಿರುದು ನೀಡಲಾಗುತ್ತದೆ.ಈ ವರ್ಷ ಶಿವಮೊಗ್ಗ ಜಿಲ್ಲೆಯ ಬಿದರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ ದೇವೇಂದ್ರಪ್ಪ ರವರಿಗೆ ಈ ಗೌರವ ದೊರೆತಿರುವುದು ಮಲೆನಾಡಿಗರೆಲ್ಲಾರು ಹೆಮ್ಮೆ ಪಡುವಂತಹ ಸಂಗತಿ ಎಂದರು.

ನಂತರ ಮಾತನಾಡಿದ ದೇವೇಂದ್ರಪ್ಪ ರವರು ಉತ್ತಮ ಜ್ಞಾನ ಪಡೆದ ಮಗು ಸುಶಿಕ್ಷಿತ ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ. ಸತ್ಪ್ರಜೆಗಳಿಂದ ಕೂಡಿದ ದೇಶ ಸಂಪದ್ಭರಿತವಾಗಿ ಬೆಳೆಯುವುದಲ್ಲದೆ, ಇತರೆ ದೇಶಗಳಿಗೂ ಮಾದರಿಯಾಗುವುದು, ಇಲ್ಲಿ ಹೆಚ್ಚಾಗಿ ರೈತಾಪಿ ವರ್ಗದವರು ಇದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಇದೇ ತಮ್ಮ ಹೆಬ್ಬಯಕೆ ಎಂದರು.

ಈ ಸರಳ ಪ್ರಶಸ್ತಿ ಪ್ರಧಾನ ಸಂಧರ್ಭದಲ್ಲಿ ಗರ್ತಿಕೆರೆ ಗ್ರಾಪಂ ಉಪಾಧ್ಯಕ್ಷರಾದ ಲಿಂಗರಾಜ್ ಬಂಡಿ,ಬರಹಗಾರ ಸಂಘದ ಸಲಹಾ ಸಮಿತಿಯ ಬೋಜು ಹಾಲುಗುಡ್ಡೆ,ಗ್ರಾಪಂ ಸದಸ್ಯರಾದ ಸಚಿನ್ ಗೌಡ,SDMC ಅಧ್ಯಕ್ಷರಾದ ಪದ್ಮರಾಜ್,ಮುಖಂಡರಾದ ಸುವರ್ಣ ಉಮೇಶ್,ಚಿಟ್ಟೆಗದ್ದೆ ಪುರುಷೋತ್ತಮ್,ಶಿಕ್ಷಕರಾದ ದಿನೇಶ್, ಮಧುಕುಮಾರ್,ಕೆ ಎಂ ಹೇಮಲತಾ ಹಾಗೂ ಪೋಷಕರು ಮತ್ತು ಎಸ್ಡಿಎಂ ಸಿ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…