ಜಲಪಾತದ ದಟ್ಟ ನಿಸರ್ಗದ ಏಕಾಂತತೆಯಲಿ
ಕುಳಿತ ತರುಣಿಯೇ
ಒಮ್ಮೆ ಚಂದ್ರನೂ ಮೈಮರೆವ ಸೌಂದರ್ಯವತಿ
ಗಗನಕಡೆಯ ಸುರಿವ ನೀರಿನಲಿ
ನೆನೆಯುತಿರುವ ನೀರೆಯ ಕಂಡು ಧನ್ಯನಾದೆ
ಕಾಲ್ಗಳೆರಡು ಸೇರಿಸಿ ನಿಷ್ಕಲ್ಮಶ ನೇರ ನೋಟವಾಗಿ
ಬಾಹುಗಳೆರಡು ಮಂಡಿಯೂರಿ ಗಲ್ಲದಲಿ
ಇಟ್ಟಿರಲು ಕಂಡ ಕಂಣ್ಗಳೇ ಸಾರ್ಥಕದಲಿ
ನಯನಕಾಂತಿ ಪ್ರಜ್ವಲಿಸುತಲಿ
ಅಧರ ಕೆಂಬಣ್ಣ ಗಂಗೆ ಸವಿಯುತಲಿ
ಕಾಲ್ಬೆರಳ ಕಾಮನಬಿಲ್ಲನು ಮತ್ಸ್ಯಗಳು ಚುಂಬಿಸುತಲಿ
ಮುತ್ತಿನರಕ್ಷಾಕವಚ ಮಿನುಗುತಿಹುದು ಎವೆಯಾಗಿ

ಬಲಬಾಹು ಗಲ್ಲವ ಪಿಡಿದರೆ
ಮತ್ತೋಂದು ಅರತ್ನಿ ಪಿಡಿದ ಭಂಗಿಯಾಗಿರೆ
ಮುದ್ರೆ ಬದಲಿಸುವ ಕ್ಷಣ ರೋಮಾಂಚನ
ತಾಗಿರುವುದು ಹೃದಯಕೆ ಪ್ರೀತಿಯ ಸಿಂಚನ
ಏ ಲಲನೆ ನಿನ್ನ ಕೇಶರಾಶಿ ಆಕಾಶದೆಡೆ ಎಸೆದ ಶೈಲಿಗೆ
ಅಭಿಮಾನಿ ನಾ ನಿನಗೆ
ಪವನನೂ ನಿನ್ನ ಸೋಕಿ ಪಾವನನೆಂದು
ಸದ್ದಲಿ ಬೀಗುತಿರುವುದು ನಿನಗರಿವಿಲ್ಲ ಇಂದೂ
ನಿನ್ನ ಸೊಕುತಿರಲು ಗಂಗೆ ಎಷ್ಟು ಧನ್ಯಳೊ
ನೀರೆಯ ಸ್ಪರ್ಶಿಸಲು ನೀರಲಿ ಹಾರಿದೆ
ನೀನೆಲ್ಲಿ ಮಾಯವಾದೆ ಅಪ್ಸರೆ…