ಶಿವಮೊಗ್ಗ: ಗೋಪಾಳದ ಪದ್ಮಾ ಟಾಕೀಸ್ ಬಳಿ ಮೊನ್ನೆ ರಾತ್ರಿ ಹಲ್ಲೆಗೀಡಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾದ ವೆಂಕಟೇಶ್ ಅವರನ್ನು ಸಚಿವರ ಕೆ.ಎಸ್. ಈಶ್ವರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.ಈ ಸಂದರ್ಭದಲ್ಲಿ ಕೆ.ಇ. ಕಾಂತೇಶ್, ಎಸ್.ಎನ್. ಚನ್ನಬಸಪ್ಪ, ಮೋಹನ್ ರೆಡ್ಡಿ, ಜಗದೀಶ್, ನಾಗರಾಜ್, ಸಂತೋಷ್ ಬಳ್ಳೆಕೆರೆ ಮೊದಲಾದವರಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ ರವರು ಕೆಲವು ಗೂಂಡಾ ಮುಸಲ್ಮಾನರ ಮಾನಸಿಕ ವಿಕೃತಿ ಇನ್ನೂ ಕಡಿಮೆಯಾಗಿಲ್ಲ. ಅವರಿಗೆ ಮುಸ್ಲಿಂ ನಾಯಕರು ಕಿವಿಹಿಂಡಿ ಬುದ್ಧಿ ಹೇಳಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.ಅವರು ಇಂದು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಇತ್ತೀಚೆಗೆ ಹಲ್ಲೆಗೊಳಗಾದ ವೆಂಕಟೇಶ್ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಹರ್ಷ ಕೊಲೆಯ ನಂತರವೂ ಹಿಂದೂ ಯುವಕರಿಗೆ ಇನ್ನೂ ನೋವು, ಆಕ್ರೋಶ ತಪ್ಪಿಲ್ಲ. ಹರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೊಲೆಗಡುಕರ ಬಂಧನವೂ ಆಗಿದೆ.
ಆದರೆ, ಇದರ ನಡುವೆಯೇ ನಮ್ಮ ಪಕ್ಷದ ಕಾರ್ಯಕರ್ತ ವೆಂಕಟೇಶ್ ಅವರ ಮೇಲೆ ಮೂರ್ನಾಲ್ಕು ಮಂದಿ ಮುಸಲ್ಮಾನ್ ಗೂಂಡಾಗಳು ಹಲ್ಲೆ ಮಾಡಿದ್ದಾರೆ ಎಂದು ದೂರಿದರು.ವಾಕಿಂಗ್ ಹೋದವರ ಮೇಲೆ ಈ ರೀತಿ ಹಲ್ಲೆ ಮಾಡಿರುವುದು ಖಂಡನೀಯ. ಸಹಜವಾಗಿಯೇ ಹಿಂದೂ ಯುವಕರಿಗೆ ಈ ಬಗ್ಗೆ ಆಕ್ರೋಶ ಉಂಟಾಗಿದೆ. ಶಾಂತ ಸ್ಥಿತಿಯನ್ನು ಮತ್ತಷ್ಟು ಕದಡುವ ರೀತಿಯಲ್ಲಿ ಈ ಮುಸ್ಲಿಂ ಗೂಂಡಾಗಳು ವರ್ತಿಸುತ್ತಿದ್ದಾರೆ. ಇವರಿಗೆ ಆ ಸಮುದಾಯದ ಹಿರಿಯರು ಪಾಠ ಕಲಿಸಬೇಕು. ಇಲ್ಲದಿದ್ದರೆ, ನಾವೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.