ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಜನೌಷಧಿ ಯೋಜನೆ ರಾಷ್ಟ್ರದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಪ್ರತಿವರ್ಷ ಮಾ. 7 ರಂದು ಜನೌಷಧಿ ದಿನಾಚರಣೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಹಮ್ಮಿಕೊಂಡಿದೆ ಎಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ. ಹೇಮಂತ್ ಹೇಳಿದರು.

ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಾದ್ಯಂತ 8691 ಜನೌಷಧಿ ಮಳಿಗೆಗಳು ಇವೆ, ಒಟ್ಟು ವಾರ್ಷಿಕ 750 ಕೋಟಿ ರುಪಾಯಿಗಳು ವ್ಯವಹಾರವಾಗಿರುತ್ತದೆ. ಅದರಲ್ಲಿ  ಒಟ್ಟು 4500 ಕೋಟಿ ರೂಪಾಯಿಗಳಷ್ಟು ಹಣವನ್ನು ಜನಸಾಮಾನ್ಯರಿಗೆ ಉಪಯೋಗವಾಗಿದೆ. ಒಟ್ಟು ಜನೌಷಧಿ ಮಳಿಗೆಗಳು 2025 ವರೆಗೆ 10500 ಔಷಧಿ ಮಳಿಗೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ಮಂಡಿಸಿದೆ ಎಂದರು.ಎಲ್ಲ ಬಡ ಮಧ್ಯಮ ವರ್ಗಕ್ಕೆ ಈ ಜನೌಷಧಿಯೂ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜನಸಾಮಾನ್ಯರಿಗೆ ಉಪಯೋಗವಾಗುವ ಔಷಧಿಗಳು 1451 ವಿಧದ ಔಷಧಿಗಳು, ಶಸ್ತ್ರಚಿಕಿತ್ಸೆಗೆ ಸಂಬಂಧ ಔಷಧಿಗಳು 250 ಇವೆ. ಜನೌಷಧಿ ದಿವಸದ ಪ್ರಯುಕ್ತ ಸುಮಾರು ಕಾರ್ಯಕ್ರಮಗಳು ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 32 ಜನೌಷಧಿಗಳು, ನಗರದಲ್ಲಿ 11 ಜನೌಷಧಿ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.ಜನೌಷಧಿಯಲ್ಲಿ ದೊರೆಯುವ ಎಲ್ಲಾ ಬಗೆಯ ಔಷಧಗಳು ಒಳ್ಳೆಯ ಗುಣಮಟ್ಟದ್ದಾಗಿದೆ. ಆದರೆ, ಈ ಬಗ್ಗೆ ಕೆಲವರು ಅದರಲ್ಲೂ ವೈದ್ಯಕೀಯ ಕ್ಷೇತ್ರದವರೇ ಅಪಪ್ರಚಾರ ಮಾಡುತ್ತಿದ್ದಾರೆ. ಈ ಔಷಧಿಗಳು ಅಂತರಾಷ್ಟ್ರೀಯ ಗುಣಮಟ್ಟ ಹೊಂದಿದ್ದು, ಎನ್.ಎ.ಬಿ.ಎಲ್. ಲ್ಯಾಬ್ ನಿಂದ ಪ್ರಮಾಣೀತವಾಗಿವೆ. ಆದ್ದರಿಂದ ಸಾರ್ವಜನಿಕರು ಬಡವರಿಗೆ ವರದಾನವಾಗಿರುವ ಈ ಔಷಧಿಗಳನ್ನು ಯಾವುದೇ ಭಯವಿಲ್ಲದೇ ಉಪಯೋಗಿಸಬೇಕು. ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದ ಅವರು, ಇದರಿಂದ ಲಕ್ಷಾಂತರ ಮಂದಿಗೆ ಉದ್ಯೋಗವೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಜನೌಷಧಿಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮೀಣ ಮಟ್ಟದಲ್ಲೂ ತಲುಪುವಂತೆ ಮಾಡಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಹ ಸಂಚಾಲಕ ಡಾ. ಶ್ರೀನಿವಾಸ್ ರೆಡ್ಡಿ, ನಗರ ಸಂಚಾಲಕ ಡಾ. ಗೌತಮ್, ರಾಜ್ಯ ಸದಸ್ಯರು ಡಾ.ಸುರೇಶ್, ಜಿಲ್ಲಾ ಸದಸ್ಯ ಡಾ.ಮರುಳಾರಾಧ್ಯ ಮಠ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…