07/03/2022 ಸೋಮವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ ಎಸ್. ಯಡಿಯೂರಪ್ಪ ನವರ ಕ್ಷೇತ್ರದಲ್ಲಿ ಬೀದಿ ಬದಿ ವ್ಯಾಪಾರಿಗಳು ನ್ಯಾಯಕ್ಕಾಗಿ ಹಗಲು-ಇರುಳು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಪುರಸಭೆಯ ವ್ಯಾಪ್ತಿಯ ಶ್ರೀ ಮಾರಿಕಾಂಬಾ ಬಯಲು ರಂಗಮಂದಿರ ಕಾಂಪೌಂಡ್ ಮತ್ತು ಬಿ.ಎಸ್.ಎನ್.ಎಲ್ ಕಾಂಪೌಂಡ್ ಬಳಿ ರೈತಾಭಿಮಾನ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರು, ಶಿಕಾರಿಪುರಕ್ಕೆ 5ನೇ ತಾರೀಖು ಆಗಮನದಿಂದ ನಗರದಲ್ಲಿ ಶ್ರೀ ಮಾರಿಕಾಂಬಾ ಬಯಲು ರಂಗಮಂದಿರ ಕಾಂಪೌಂಡ್ ಮತ್ತು ಬಿ.ಎಸ್.ಎನ್.ಎಲ್ ಕಾಂಪೌಂಡ್ ಬಳಿ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿಂದ ಬೀದಿ ಬದಿ ವ್ಯಾಪಾರಿಗಳಿಗೆ ದಿನಾಂಕ: 04/03/2022 ರಿಂದ 05/03/2022ರ ಎರಡು ದಿನಗಳ ವರೆಗೆ ವ್ಯಾಪಾರ ಬಂದು ಮಾಡಲು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದು ಅದರಂತೆ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಬಂದು ಮಾಡಿರುತ್ತಾರೆ.

5ನೇ ತಾರೀಖಿನ ಸಂಜೆ ವೇಳೆ ಜೆಸಿಬಿಯಿಂದ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಿಗಳ ಸ್ಥಳವನ್ನು ಯಾವುದೇ ಮಾಹಿತಿ ನೀಡದೆ ದೊಂಸ ಗೊಳಸಿರುತ್ತಾರೆ. ಯಾವುದೇ ಮಾಹಿತಿ ಅಗಲಿ, ಬೇರೆ ಸ್ಥಳವನ್ನು ನೀಡದೆ ನಮ್ಮ ವ್ಯಾಪಾರದ ಸ್ಥಳವನ್ನು ದೊಂಸಗೊಳಿಸಿರುವಿರಿ ಎಂದು ಕೇಳಿದ ವ್ಯಾಪಾರಿಗಳಿಗೆ ಏಕವಚನದಲ್ಲಿ ನಿಂದನೆ ಮಾಡಿರುತ್ತಾರೆ.ಇಂದು ಬೆಳಗ್ಗೆ ತಹಸಿಲ್ದಾರ್ ಮನವಿ ನೀಡಿ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನಮ್ಮ ವ್ಯಾಪಾರದ ಸ್ಥಳ ನಾಶ ಮಾಡಿರುತ್ತಾರೆ, ನಮ್ಮನ ನಂಬಿರುವ ಕುಟುಂಬಕ್ಕೆ ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ ಎಳೆದ, ಮಹಿಳೆಗೆ ಏಕವಚನದಲ್ಲಿ ನಿಂದನೆ ಮಾಡಿರುವ ಅಧಿಕಾರಿಯನ್ನು ಅಮಾನತು ಗೊಳಿಸಿ, ನಮ್ಮ ನಷ್ಟವನ್ನು ಅಧಿಕಾರಿಯಿಂದ ಬರಿಸಬೇಕು, ಎಂದು ನಾಶಮಾಡಿದ ವ್ಯಾಪಾರದ ಸ್ಥಳದಲ್ಲಿ ಧರಣಿ ಸತ್ಯಾಗ್ರಹ ಕುಳಿತಾ, ಬೀದಿ ಬದಿ ವ್ಯಾಪಾರಸ್ಥರು.

ರಾತ್ರಿ ವೇಳೆ ಶಿಕಾರಿಪುರದ ತಾಸಿಲ್ದಾರಾದ ಮಾನ್ಯ ಶ್ರೀ ಕವಿರಾಜ್ ರವರು ಸ್ಥಳಕ್ಕೆ ಭೇಟಿ ನೀಡಿ ಇದರ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಸುವೆ ಎಂದು ತಿಳಿಸಿದರು.

ವ್ಯಾಪಾರದ ಸ್ಥಳ ನಾಶಮಾಡಿದ ಅಧಿಕಾರಿ ಅಮಾನತು ಮಾಡಬೇಕು, ನಮಗೆ ಇಷ್ಟು ದಿನದ ನಷ್ಟಕ್ಕೆ ಪರಿಹಾರ ನೀಡಬೇಕು, ನ್ಯಾಯಕ್ಕಾಗಿ ಹೋರಾಟ ಧರಣಿ ಸತ್ಯಾಗ್ರಹ ಮುಂದುವರಿಸಿದ ಬೀದಿ ಬದಿ ವ್ಯಾಪಾರಿಗಳು ಆಗ್ರಹಿಸಿದರು.

ವರದಿ ಮಂಜುನಾಥ್ ಶೆಟ್ಟಿ…