ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಸಾರಥ್ಯದಲ್ಲಿ ಜಿಲ್ಲಾ ಕಾಂಗ್ರೆಸ್ಸಿನ ಮಹಿಳಾ ಮುಖಂಡರುಗಳು, ರೋಟರಿ ಚಿತಾಗಾರಕ್ಕೆ ತೆರಳಿ ಸುಮಾರು 24 ವರ್ಷಗಳಿಂದ ಚಿತಾಗಾರದ ಜವಾಬ್ಧಾರಿ ವಹಿಸಿಕೊಂಡ ಅನಸೂಯ ಅವರಿಗೆ ಸನ್ಮಾನ ಮಾಡುವ ಮುಖಾಂತರ ರಾಷ್ಟ್ರೀಯ ಮಹಿಳಾ ದಿನಚಾರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು.
ರಾಜ್ಯ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷರಾದ ಸೌಗಂಧಿಕಾ ರಘುನಾಥ್ ಅವರು ಮಾತನಾಡಿ, ಮಹಿಳೆಯರಿಗೆ ಸಮಾಜದಲ್ಲಿ 2 ನೇ ದರ್ಜೆಯ ಸ್ಥಾನ ದೊರಕಿದೆ. ಶೇಕಡಾ 1000 ಜನ ಗಂಡುಮಕ್ಕಳು , 1019 ಹೆಣ್ಣು ಮಕ್ಕಳಿದ್ದರು .ಆದರೆ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವಂತೆ ಬ್ರೂಣ ಹತ್ಯೆ ಜಾಸ್ತಿಯಾಗಿದ್ದು , ಹೆಣ್ಣು ಮಕ್ಕಳ ಸಂಖ್ಯೆ 946 ಕ್ಕೆ ಇಳಿದಿದೆ .ಎಲ್ಲೆಲ್ಲೂ ಅತ್ಯಾಚಾರಗಳು , ವರದಕ್ಷಿಣೆ ಕಿರುಕುಳ , ಹತ್ಯೆಗಳು ಹೆಣ್ಣಿನ ಮೇಲೆ ಎಗ್ಗಿಲ್ಲದೆ ನಡೆಯುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಶೇಕಡಾ 50% ಮೀಸಲಾತಿ ಮಹಿಳೆಗಿದ್ದರು ಕೂಡ ,ಮಹಿಳೆಯರು ಶೋಷಣೆಗೆ ಒಳಗಾಗೋದು ತಪ್ಪಿಲ್ಲ .ಗಾಂಧಿಜೀ ಅವರು ಕನಸು ಕಂಡ ರಾಮರಾಜ್ಯ ನಿರ್ಮಾಣವಾಗಬೇಕು ಎಂದು ಹೇಳಿದರು .ಹಾಗೆಯೇ ರಾಜ್ಯ ಮಹಿಳಾ ಕಾರ್ಯದರ್ಶಿ ಕವಿತಾ ಅವರು ಮಾತನಾಡಿ ಇಂದಿರಾ ಗಾಂಧಿಯವರು ಹೇಳಿದಂತೆ ಒಲೆ ಹಚ್ಚುವ ಕೈ ದೇಶವನ್ನು ಆಳಬಲ್ಲದು ಎಂದು ಮಹಿಳೆಯರು ನಿರೂಪಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ ಲಿತಬಸ್ಸುಮ್ , ಸುಮಾ , ನಜಿಮಾ ,ಗೀತಾ ಬಾಯಿ ,ಪ್ರೇಮ , ಮಂಜುಳಾ , ಪ್ರತಿಭಾ , ಶಬಾನಾ , ಮಂಜುಳಾ ,ಕೌಸರ್ ,ಅನಿತಾ , ಗೀತಾ , ಕವಿತಪ್ರಿಯ , ರೇಷ್ಮಾ , ಸುಕನ್ಯಾ ಮುಂತಾದವರಿದ್ದರು .