ವಿಧ್ಯಾರ್ಥಿಗಳು ಪ್ರಶ್ನಾತ್ಮಕ, ತಾರ್ಕಿಕ, ಹಾಗೂ ಸಂಶೋಧನಾ ಮನೋಭಾವ ಹೊಂದಿರಬೇಕು, ಆಗಲೇ ಅವರು ಅಂದುಕೊಂಡಿದ್ದನ್ನು ಸಾದಿಸಲು ಸಾದ್ಯ ಎಂದು ಸಂಶೋದಕ ಹಾಗೂ ಶಿಕ್ಷಣ ತಜ್ಞರಾದ ಶ್ರೀ ಎ.ಎಚ್.ಸಾಗರ್ ತಿಳಿಸಿದರು.

ಅವರು ಇಂದು ಕುವೆಂಪು ವಿಶ್ವವಿದ್ಯಾಲಯ, ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ, ಇಂಗ್ಲಿಷ್ ವಿಭಾಗ ವತಿಯಿಂದ ಸಾಹಿತ್ಯವು ಸಾಮಾಜಿಕ ನ್ಯಾಯದ ಸಾಧನವಾಗಿದೆ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಶ್ರೀ ಎ.ಎಚ್.ಸಾಗರ್ ತಿಳಿಸಿದರು. ಪ್ರತಿಯೊಬ್ಬ ವಿಧ್ಯಾರ್ಥಿಯು ಹೊಸ ಹೊಸ ವಿಚಾರಗಳತ್ತ ಸಂಶೋದಿಸುವ ಮನೋಭಾವ ಹೊಂದಿರಬೇಕು. ನಮಗೆ ಎಲ್ಲವೂ ಗೊತ್ತು ಎನ್ನುವ ಬದಲು ಪ್ರಶ್ನೆ ಮಾಡಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಯಾವಾಗಲೂ ವಿದ್ಯಾರ್ಥಿಗಳು ತಮಗೆ ಅರ್ಥವಾಗದಿದ್ದರೆ, ಪ್ರಶ್ನೆ ಮಾಡಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕೆಂದರು.

ಪ್ರಶ್ನೆಗಳನ್ನು ಕೇಳುವುದರಿಂದ ನಮಗೆ ಹೊಸ ಹೊಸ ವಿಷಯಗಳ ಬಗ್ಗೆ ತಿಳಿಯುವುದು ಅಲ್ಲದೇ ನಮಗೆ ನಮ್ಮ ಸಂದೇಹ ಪರಿಹಾರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ತಾರ್ಕಿಕ ಮನೋಭಾವನೆ ಇದ್ದರೆ ಅವರಲ್ಲಿ ಹಲವಾರು ವಿಷಯಗಳ ಬಗ್ಗೆ ಜ್ಞಾನ ಲಭಿಸುತ್ತದೆ. ತರ್ಕ ಎಂಬುದು ಕೆವಲ ಒಣ ಹರಟೆಯಲ್ಲ, ಅದೊಂದು ಜ್ಞಾನಾರ್ಜನೆಯ ಒಂದು ಪ್ರಮುಖವಾದ ಅಂಶ ಎಂದರು. ವಿದ್ಯಾರ್ಥಿಗಳು ಹೊಸ ಹೊಸ ಸಂಶೋದನೆಯನ್ನು ಮಾಡಿ ಹೊಸ ಹೊಸ ವಿಚಾರಗಳನ್ನು ಸಮಾಜಕ್ಕೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪ್ರಾಚಾರ್ಯ ಡಾ.ಕೆ.ಬಿ. ಧನಂಜಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರಾದ್ಯಾಪಕ ಡಾ.ಸಿರಾಜ್ ಅಹ್ಮದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಅತಿಥಿಗಳ ಪರಿಚಯವನ್ನು ಶ್ವೇತಾ ಬಿ. ಮಾಡಿದರು.ಸಹಾಯಕ ಪ್ರಾಧ್ಯಾಪಕರಾದ ಶಿವಾನಂದ ಸ್ವಾಮಿ ವಂದಿಸಿದರು.ರವಿ ಪೂಜಾರ ಪ್ರಾರ್ಥಿಸಿದರು.ಸೌಮ್ಯ, ನಿರೂಪಮ ಕಾರ್ಯಕ್ರಮ ನಿರೂಪಿಸಿದರು.

ವರದಿ ಮಂಜುನಾಥ್ ಶೆಟ್ಟಿ…