09/03/2022 ಬುಧವಾರ ಬೆಳಗ್ಗೆ ಶಿವಮೊಗ್ಗ ನಗರದ, ಬಿ.ಹೆಚ್.ರಸ್ತೆ ಬೆಕ್ಕಿನ ಕಲ್ಮಠ ವೃತ್ತದ ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ, ಮಹಾನಗರ ಪಾಲಿಕೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲ್ಯ ಮೀಷನ್ ಶಿವಮೊಗ್ಗ, ಡೆ-ನಲ್ಮ್ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ, ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪಘಟಕದಡಿ ಎರಡು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ.
ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಕೈ ಹಾಗಾಗ ತೊಳೆಯಬೇಕು, ಸ್ವಚ್ಚತೆಯ ವಿಧಾನ, ಗುಟುಕ, ತಂಬಾಕುಗಳಿಂದ ಕ್ಯಾನ್ಸರ್ ಮಾರಕ ರೋಗ ಬರುತ್ತದೆ, ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿಯನ್ನು ಮೆಗ್ಗಾನ್ ಆಸ್ಪತ್ರೆಯ ಸೀನಿಯರ್ ಸ್ಟಾಪ್ ನರ್ಸ ಶ್ರೀ ಮತಿ ಚಂದ್ರಿಕಾ ರವರು ತಿಳಿಸಿದರು.
ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಈ ಕಾರ್ಯಾಗಾರ ಇಂದು ಮತ್ತು ನಾಳೆ ಎರಡು ದಿನಗಳು ಇರುತ್ತದೆ, ಸಂಬಂಧಪಟ್ಟ ಇಲಾಖೆಗಳ ಸಂಪನ್ಮೂಲ ಅಧಿಕಾರಿಗಳು ಬಂದು ಮಾಹಿತಿ ಹೇಳುವಾಗ ಗಮನವಿಟ್ಟು ಕೇಳಬೇಕು, ಇಂತಹ ಮಾಹಿತಿ ಎಲ್ಲರಿಗೂ ಸಿಗುವುದಿಲ್ಲ, ಬಹಳಷ್ಟು ಜನರಿಗೆ ಓದು ಬರಹ ಬರದ ಕಾರಣ ಬೂತ್ ರಚಿಸಿ ಅಧ್ಯಕ್ಷರ ನೇಮಕ ಮಾಡಲಾಗಿದೆ, ಅವರಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಮಾಹಿತಿ ನೀಡಲಾಗುತ್ತಿದೆ, ಅದರ ಪಾಲನೆ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಮಾಡಬೇಕು ಎಂದು ಹೇಳಿದರು.
ಪಾಲಿಕೆ ವತಿಯಿಂದ ಎರಡು ಪ್ಲಾಸ್ಟಿಕ್ ಪುಟ್ಟಿಯ ನೀಡಲಾಗಿದೆ, ಅದರಲ್ಲಿ ಒಣ ಕಸ, ಹಸಿ ಕಸವನ್ನು, ವಿಂಗಡಿಸಿ ಘಂಟೆಗಾಡಿಗೆ ನೀಡಿ, ನಿಮ್ಮ ವ್ಯಾಪಾರದ ಸ್ಥಳವನ್ನು ಸ್ವಚ್ಛತೆಯಿಂದ ಇಟ್ಟಿಕೋಳ್ಳಿ ಎಂದು ಪಾಲಿಕೆ ಸಮುದಾಯ ವ್ಯವಾಹರಿಕ ಅಧಿಕಾರಿಗಳಾದ ಶ್ರೀ ಲೋಕೇಶಪ್ಪ ನವರು ತಿಳಿಸಿದರು.
ಮೆಗ್ಗಾನ್ ಆಸ್ಪತ್ರೆಯ ಮೇಲ್ ವಿಚಾರಕರಾದ ಶ್ರೀ ವಿಕಾಸ ರವರು, ತಂಬಾಕು ಸೇವನೆ, ಧೂಮಪಾನ, ಮದ್ಯಪಾನ ಇತರೇ ವ್ಯಸನಗಳಿಂದ ಅಗುವ ಮಾರಕ ಕಾಯಿಲೆಯ ಚಿತ್ರಗಳನ್ನು ಎಲ್ಲಾರಿಗೂ ತೋರಿಸುತ್ತಾ ವ್ಯಸನಗಳನ್ನು ಬಿಡಲು ಸಪಥ ಮಾಡಿ ಎಂದು ಎಲ್ಲರಿಗೂ ಕೇಳಿಕೊಂಡರು. ಈ ಕಾರ್ಯಾಗಾರದಲ್ಲಿ ಪಾಲಿಕೆ ಸಮುದಾಯ ಸಂಘಟಕರಾದ ಶ್ರೀ ರತ್ನಾಕರ್, ಟಿವಿಸಿ ಸದಸ್ಯರು, ಬೀದಿ ಬದಿ ವ್ಯಾಪಾರಿಗಳು ಇನ್ನೂ ಇತರರೂ ಉಪಸ್ಥಿತರಿದ್ದರು.