ಶಿವಮೊಗ್ಗ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಯಶಸ್ಸಿನ ದಾಪುಗಾಲನ್ನು ಇಡುತ್ತಿದ್ದು, ಉದ್ಯಮ, ಶಿಕ್ಷಣ, ಆಡಳಿತ ನಿರ್ವಹಣೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಪ್ರಭಾವ ವ್ಯಾಪಿಸುತ್ತಿದ್ದಾರೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಜಯಂತಿ ವಾಲಿ ಅಭಿಪ್ರಾಯಪಟ್ಟರು.
ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಮನೆಯನ್ನು ನಿಭಾಯಿಸುವ ಜತೆಯಲ್ಲಿಯೇ ವೃತ್ತಿ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಸಾಮಾರ್ಥ್ಯದ ಬಗ್ಗೆ ಎಲ್ಲರಿಗೂ ಅರಿತುಕೊಳ್ಳಬೇಕು. ಮಹಿಳೆಯರನ್ನು ಕೀಳಾಗಿ ಕಾಣಬಾರದು ಎಂದು ತಿಳಿಸಿದರು.
ಮಹಿಳೆಯರು ಈ ದೇಶದ ಶಕ್ತಿ ಹಾಗೂ ಆಸ್ತಿ. ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆಯು ಮಹಿಳೆಯು ತಾಯಿಯಾಗಿ, ತಂಗಿಯಾಗಿ, ಮಗಳಾಗಿ ಸ್ಫೂರ್ತಿಯಾಗಿರುತ್ತಾಳೆ. ಮನೆಯಲ್ಲಿ ಹಾಗೂ ವೃತ್ತಿ ಕ್ಷೇತ್ರದಲ್ಲಿಯು ನಿರಂತರ ಶ್ರಮಿಸುತ್ತಾಳೆ. ಸಮಾಜಮುಖಿಯಾಗಿ ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್ ಮಾತನಾಡಿ, ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ಭಾಗಿಯಾಗಬೇಕು. ಸಂಘಟನಾತ್ಮಕ ಕೌಶಲ್ಯ ಬೆಳೆಸಿಕೊಂಡು ಸೇವಾ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ರೋಟರಿಯ ಸಮಿತಾ ಸೂರ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು. ನಮಿತಾ ಅವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆರ್ಥಿಕ ಸಹಾಯ ಸೇರಿದಂತೆ ವಿವಿಧ ರೀತಿಯಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದಕ್ಕೆ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕ್ಲಬ್‌ನ ಜಿಲ್ಲಾ ಸಂಪಾದಕಿ ಶಬರಿ ಕಡಿದಾಳ್, ಮಾಜಿ ಅಧ್ಯಕ್ಷೆ ರಾಜೇಶ್ವರಿ ಪ್ರತಾಪ್, ವೇದಾ ನಾಗರಾಜ್, ಜ್ಯೋತಿ ಸುಬ್ಬೇಗೌಡ, ವೀಣಾ ಹರ್ಷ, ಉಮಾ ವೆಂಕಟೇಶ್, ಸುಮಾ ರವಿ, ನಿರ್ಮಲ ಮಹೇಂದ್ರ, ಮಮತಾ ಸುಧೀಂದ್ರ, ವಾಗ್ದೇವಿ, ವಿಜಯಾ ಶಶಿಧರ್, ಮಧುರಾ ಮಹೇಶ್, ವಿಜಯ ರಾಯ್ಕರ್, ವಾಣಿ ಪ್ರವೀಣ್, ವೀಣಾ ಸುರೇಶ್, ಲತಾ ಶಂಕರ್, ಸೌಭಾಗ್ಯ ಹಾಗೂ ಇನ್ನರ್‌ವ್ಹೀಲ್ ಸದಸ್ಯರು ಉಪಸ್ಥಿತರಿದ್ದರು.