13/03/2022 ಭಾನುವಾರ ಬೆಳಿಗ್ಗೆ ಶಿವಮೊಗ್ಗ ನಗರದ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಿ.ಎಸ್. ಅರುಣ್ ರವರಿಗೆ, ಬಿ.ಹೆಚ್.ರಸ್ತೆಯ ಮೈನ್ ಮಿಡ್ಲ್ ಸ್ಕೂಲ್, ಹಳೆ ವಿದ್ಯಾರ್ಥಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಈ ಶಾಲೆಗೆ 134 ವರ್ಷಗಳ ಇತಿಹಾಸವಿದೆ, ಇದು 1ರಿಂದ 5ನೇ ತರಗತಿ ಕನ್ನಡ ಮಾಧ್ಯಮ ಹಾಗೂ 6ಮತ್ತು 7ನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮವಿದೆ, 1ರಿಂದ 5ನೇ ತರಗತಿ ಕನ್ನಡ ಮಾಧ್ಯಮ ವಿರುವುದರಿಂದ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬೇರೆ ಬೇರೆ ಶಾಲೆಗೆ ಕೆಪಿಎಸ್ ಅಡಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ನೀಡಲಾಗಿದೆ, ಹಲವು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಈ ಸಾಲಿನಿಂದಲ್ಲೇ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಆಡಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ ಯೊಂದಿಗೆ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಈ ಶಾಲೆಗೆ ಮೊದಲ ಆದ್ಯತೆ ನೀಡಿ ಎಂದು ವಿಧಾನ ಪರಿಷತ್ ಸದಸ್ಯರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಿ.ಎಸ್. ಅರುಣ್ ರವರು, ಎನ್ಇಪಿ ಆಡಿ ಸ್ಥಳೀಯ ಮಾತೃಭಾಷೆಗೆ ಆದ್ಯತೆ ಇದೆ, 134 ವರ್ಷಗಳ ಇತಿಹಾಸವಿರುವ ಹಳೇ ಶಾಲೆಗೆ ಈ ಶೈಕ್ಷಣಿಕ ಸಾಲಿನಿಂದಲೇ , ಕೆಪಿಎಸ್ ಅಡಿ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಲು ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ಶ್ರೀ ಪರಶುರಾಮ, ಕಾರ್ಯದರ್ಶಿ ಶ್ರೀ ಮತಿ ಸವಿತಾ ವೆಂಕಟೇಶ್, ಸದಸ್ಯರಾದ ಶ್ರೀ ಶಂಕರ್ ಶಿವಮೊಗ್ಗ, ಶ್ರೀ ರಾಮು ವಿ, ಶ್ರೀ ಚಂದ್ರು, ಶ್ರೀ ಲಿಂಗರಾಜು, ಶ್ರೀ ಮತಿ ಸುನೀತಾ ಹಾಗೂ ಇತರರೂ ಉಪಸ್ಥಿತರಿದ್ದರು.