ಶಾಂತವೇರಿ ಗೋಪಾಲ ಗೌಡರದ್ದು, ಅದಮ್ಯ ಚೇತನ, ಅವರಂತಹ, ಸೈದ್ದಾಂತಿಕ ರಾಜಕೀಯ ಬದ್ಧತೆಯನ್ನು ಇಟ್ಟುಕೊಂಡು, ಅದರ ಅನುಷ್ಠಾನಕ್ಕೆ, ಯಾವುದೇ, ಸ್ವಾರ್ಥ ಸಾಧನೆಗೆ ಅವಕಾಶವಿಲ್ಲದಂತೆ ಹಗಲಿರುಳೂ, ತಮ್ಮನ್ನು ಸಮಾಜದ ಒಳಿತಿಗೆ, ಅರ್ಪಿಸಿಕೊಂಡ, ಪ್ರಾತಃ ಸ್ಮರಣೀಯ ರಲ್ಲಿ ಒಬ್ಬರಾಗಿದ್ದಾರೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ.

ಖ್ಯಾತ ಸಮಾಜವಾದಿ ನಾಯಕರೂ, ರಾಜಕೀಯ ಮುತ್ಸದ್ಧಿಯೂ ಆಗಿದ್ದ, ಶಾಂತವೇರಿ ಗೋಪಾಲಗೌಡ ರವರ, ಜನ್ಮ ಶಮಾನೋತ್ಸವದ, ಉದ್ಘಾಟನಾ ಸಮಾರಂಭ ಭಾಗವಹಿಸಿ, ಮಾತನಾಡಿದ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು,
ಸಮಾಜವಾದಿ ಸಿದ್ದಾಂತದ ರೂವರಿಯಾಗಿದ್ದ ಗೋಪಾಲ ಗೌಡರು, ಉಳುವವನೇ ಹೊಲ ದೊಡೆಯ ಎಂಬ ಕ್ರಾಂತಿ ಬೀಜವನ್ನು ಬಿತ್ತಿ, ಲಕ್ಷಾಂತರ ರೈತ ಕುಟುಂಬಗಳ ಕಣ್ಣೀರಿಗೆ, ಕೊನೆ ಹಾಡಿದ, ಮಹಾನ್ ನಾಯಕರಾಗಿದ್ದರು.

ಕರ್ನಾಟಕ ಏಕೀಕರಣಕ್ಕೆ. ಕಹಳೆಯೂದಿ, ಬಾಷೆ, ಸಂಸ್ಕೃತಿ, ನೆಲ ಹಾಗೂ ಜಲ ವಿಷಯಗಳ ಬಗ್ಗೆ, ಸ್ಪಷ್ಟ ಹಾಗೂ ನಿಷ್ಠುರ ಹೊಂದಿದ್ದ, ಗೋಪಾಲ ಗೌಡರು, ರಾಜ್ಯ ಕಂಡ ಒಬ್ಬ ಅಪರೂಪದ ರಾಜಕಾರಣಿಯಾಗಿದ್ದರು.

ಗೋಪಾಲ ಗೌಡರ, ಜನ್ಮ ಶಮಾನೋತ್ಸವದ ಅಂಗವಾಗಿ, ಹತ್ತು ಹಲವು ಕ್ರಮಗಳನ್ನು, ಹಮ್ಮಿಕೊಂಡಿದ್ದು ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು, ಗೌಡರ ನೆನಪಿನಲ್ಲಿ, ರಾಜ್ಯ ಮಟ್ಟದ ವಾರ್ಷಿಕ ಕೃಷಿ ಪ್ರಶಸ್ತಿ ಹಾಗೂ ಅತ್ಯಂತ ಸದನಪಟು ಪ್ರಶಸ್ತಿಯನ್ನು ಕೊಡಮಾಡುವ ನಿರ್ಧಾರ ಮಾಡಿರುವುದು, ನಮಗೆಲ್ಲರಿಗೂ ಸ್ಪೂರ್ತಿ ತಂದಿದೆ. ಅವರಿಗೆ ನಮ್ಮ ಕೃತಜ್ಞತಗಳು, ಎಂದು ಸಚಿವರು, ಹೇಳಿದರು.

ಸಮಾರಂಭದಲ್ಲಿ, ಶಾಂತವೇರಿ ಗೋಪಾಲಗೌಡ ಅವರ, ಪುತ್ರ, ರಾಮಮನೋಹರ ಹಾಗೂ ಪುತ್ರಿ ಅರಿಮತಿ ಇಳಾ ಗೀತ, ಮತ್ತು ಕುಟುಂಬ ವರ್ಗದವರೂ, ಅಭಿಮಾನಿಗಳೂ ಹಾಗೂ ಇತರರು ಉಪಸ್ಥಿತ ರಿದ್ದರು.

ವರದಿ ಮಂಜುನಾಥ್ ಶೆಟ್ಟಿ…