ಭದ್ರಾವತಿ ನಗರಸಭೆಗೆ 2021-22 ನೇ ಸಾಲಿಗೆ ಸರ್ಕಾರದಿಂದ 15 ನೇ ಹಣಕಾಸು ಅನುದಾನ ಸುಮಾರು 750 ಲಕ್ಷ ಬಿಡುಗಡೆಯಾಗಿರುತ್ತದೆ .ಭದ್ರಾವತಿ ನಗರಸಭೆಗೆ ದಿನಾಂಕ 30/4/202 ರಂದು ನಗರಸಭಾ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ .ಜಿಲ್ಲೆಯಲ್ಲಿ ಕೋವಿಡ -19 ನೇ ಅಲೆ ವ್ಯಾಪಕವಾಗಿ ಹರಡಿರುವುದರಿಂದ ಸರ್ಕಾರ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ತಾವುಗಳು ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ನೂತನವಾಗಿ ಆಯ್ಕೆಯಾದ ನಗರಸಭಾ ಸದಸ್ಯರು ಕೋವಿಡ _19 ರ 2 ಅಲೆಯ ನಿಯಂತ್ರಣಕ್ಕೆ ಶ್ರಮಿಸುತ್ತಿರುವುದು ತಮ್ಮ ಶಾಘ್ಲನೀಯ.


ಈ ಕಾರಣದಿಂದ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರು ಚುನಾವಣೆ ನಡೆಸಲು ವಿಳಂಬವಾಗಿರುತ್ತದೆ .ಈ ಸಂದರ್ಭದಲ್ಲಿ ಸಾಮಾನ್ಯ ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ತಂದು ಕೆಲವಕ್ಕೆ ಅಂಬ್ರೆಪ್ಪ ನಗರಸಭಾ ಸದಸ್ಯರ ವಾರ್ಡಿಗೆ ಅನುದಾನ ಕೊಡುವ ಮೂಲಕ ಉಳಿದ ಸುಮಾರು 25-26 ಸದಸ್ಯರ ವಾರ್ಡಿನ ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸದೆ ಮಲತಾಯಿಧೋರಣೆ ತೋರುವ ಮುಖಾಂತರ ಸುಮಾರು 750 ಲಕ್ಷ ರೂ ಗಳ ಕ್ರಿಯಾ ಯೋಜನೆಗೆ ಆಡಾಳಿತಾಧಿಕಾರಿಯಾದ ಉಪವಿಭಾಗದ ಅಧಿಕಾರಿಗಳು ಸಭಾ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ನಗರಸಭೆ ವತಿಯಿಂದ ಅನುಮೋದನೆ ಕಳುಹಿಸಿಕೊಟ್ಟಿರುತ್ತಾರೆ .ಆದುದರಿಂದ ದಯಮಾಡಿ ಅನುಮೋದನೆಗೆ ಕಳುಹಿಸಿ ಕ್ರಿಯಾ ಯೋಜನೆ ರದ್ದುಪಡಿಸಿ 35 ವಾರ್ಡ್ ಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಿ ನ್ಯಾಯ ದೊರಕಿಸಿ ಕೊಡಬೇಕಾಗಿ ಈ ಮೂಲಕ ವಿನಂತಿಸಿದರು .

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153