ಶಿವಮೊಗ್ಗ: ನಗರದ ಲಯನ್ ಸಫಾರಿಯಲ್ಲಿ ನೀರು ಸರಬರಾಜು ಮತ್ತು ಮೂಲ ಸೌಲಭ್ಯಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 4 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಚಿವ ಕೆ.ಎಸ್. ಈಶ್ವರಪ್ಪ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಲಯನ್ ಸಫಾರಿ ಅಧಿಕಾರಿಗಳು, ನಾಗೇಶ್ ಬಳಿಗಾರ್, ಮೇಯರ್, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.