ಸಾತ್ವಿಕ ಗುಣಗಳನ್ನ ಸಂಸ್ಕೃತ ಅಧ್ಯಯನದಿಂದ ಕಲಿಯಲು, ಅಳವಡಿಸಿಕೊಳ್ಳಲು ಸಾದ್ಯ ಎಂದು ಕುವೆಂಪು ವಿಶ್ವ ವಿದ್ಯಾಯಲಯದ ಉಪ ಕುಲಪತಿಗಳಾಗದ ಪ್ರೊ.ಬಿ.ಪಿ.ವೀರಭದ್ರಪ್ಪ ಇವರು ತಿಳಿಸಿದರು.ಕುವೆಂಪು ವಿಶ್ವ ವಿದ್ಯಾಯಲಯದ ಉಪ ಕುಲಪತಿಗಳಾಗದ ಪ್ರೊ.ಬಿ.ಪಿ.ವೀರಭದ್ರಪ್ಪ ಇವರು ತಿಳಿಸಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾಲಯ, ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸಂಸ್ಕೃತ ಸಾಹಿತ್ಯದಲ್ಲಿ ಸ್ವಾಸ್ಥ್ಯರಕ್ಷಣೆಯ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕೀರಣದ ಉದ್ಘಾಟನೆಯನ್ನು ಧನ್ವಂತರಿ ಪೂಜೆ ಹಾಗೂ ದೀಪಜ್ವಾಲನೆ ಮಾಡುವ ಮೂಲಕ ಮಾಡಿ ಮಾತನಾಡುತ್ತ. ಸಂಸ್ಕೃತ ಭಾಷೆಯಲ್ಲಿ ಒಳ್ಳೆಯ ಅಂಶಗಳಿವೆ, ವೇದ ಉಪನಿಷತ್ತುಗಳಲ್ಲಿ ಯಾವುದೇ ತಾಮಸಿಕ ಗುಣಗಳನ್ನು ಹೇಳಿಕೊಡುವುದಿಲ್ಲ, ಎಲ್ಲಾ ಭಾಷೆಗಳಿಗೆ ಮಾತೃ ಭಾಷೆ ಸಂಸ್ಕೃತ ಹಾಗಾಗಿ ಭಾರತದ ಸಂಸ್ಕೃತಿಯನ್ನು ಪ್ರತಿಪಾದಿಸುವುದು ಸಂಸ್ಕೃತ ಎಂದು ತಿಳಿಸಿದರು.
ಸಂಸ್ಕೃತ ಕ್ಕೆ ಯಾರೂ ವೀರೋದ ಮಾಡಬಾರದು, ಎಲ್ಲರೂ ಸಂಸ್ಕೃತ ಕಲಿಯಬೇಕು. ಸಂಸ್ಕೃತ ಕಲಿತವರು ಕನಿಷ್ಟ ಹತ್ತು ಜನರಿಗಾದರೂ ಕಲಿಸಬೇಕು, ಸಂಸ್ಕೃತ ವೈಜ್ಞಾನಿಕವಾದ ಭಾಷೆ, ಸಂಸ್ಕೃತ ಗಣಿತ, ವಿಜ್ಞಾನ ಮುಂತಾದ ವಿಷಯಗಳಿಗೆ ಅತ್ಯಂತ ಪೂರಕವಾಗಿದೆ ಎಂದರು.
ಸರ್ವರಿಗೂ ಸದಾ ಅಶಯವನ್ನು ಬಯಸುವ ಸಂಸ್ಕೃತ ವಿಶ್ವಕ್ಕೆ ಮಾದರಿಯಾಗಿದೆ, ಇಂತಹ ಇತಿಹಾಸವುಳ್ಳ ಸಂಸ್ಕೃತ ಭಾಷೆಯ ಬೆಳವಣಿಗೆಗೆ ನಮ್ಮ ವಿಶ್ವ ವಿದ್ಯಾಲಯ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಪ್ರಾರ್ಥನೆಯನ್ನು ಸಂಶೋಧನಾ ವಿದ್ಯಾರ್ಥಿಗಳು ನಡೆಸಿದರು. ಪ್ರತಿಮಾ, ಸ್ಪೂರ್ತಿ, ಮತ್ತು ಮಧುಪ್ರಿಯ
ಸ್ವಾಗತ ಹಾಗೂ ಪ್ರಾಸ್ತಾವಿಕವನ್ನು ವಿಭಾಗದ ಅಧ್ಯಕ್ಷರಾದ ಡಾ.ಎಂ.ಎ.ಶ್ರುತಿಕೀರ್ತಿ ಮಾಡಿದರು.
ದೇಶದ ಬೇರೆ ಬೇರೆ ಭಾಗಗಳಿಂದ 60 ಜನ ವಿದ್ಯಾರ್ಥಿಗಳು ತಮ್ಮ ವಿಷಯವನ್ನು ಲಿಖಿತ ರೂಪದಲ್ಲಿ ನೀಡಿರುತ್ತಾರೆ.ವಂದನಾರ್ಪಣೆ ಯನ್ನು ವಿದ್ವಾನ್ ಗಣಪತಿ ಭಟ್ ಮಾಡಿದರು ಕಾರ್ಯಕ್ರಮದ ನಿರೂಪಣೆಯನ್ನು ಡಾ. ಕಾಶೀನಾಥಶಾಸ್ತ್ರಿ ಹೆಚ್.ಎ ಮಾಡಿದರು.