ಶಿವಮೊಗ್ಗ: ನಗರದ ಪೊಲೀಸ್ ಚೌಕಿ ಬಳಿಯ 60 ಅಡಿ ರಸ್ತೆಯಲ್ಲಿ ಮನೆ ಮಾದರಿಯ ವೆಜ್ ಹಾಗೂ
ನಾನ್ ವೆಜ್ ಬಿರಿಯಾನಿ ಹೋಟೆಲ್ ಅನ್ನು ಮಾರ್ಚ್ 17ರಂದು ಸಂಜೆ 6 ಗಂಟೆಗೆ ಉದ್ಘಾಟಿಸಲಾಗುವುದು. ಮಾರ್ಚ್ 18ರಂದು ಬಿರಿಯಾನಿ ಹಬ್ಬ ಆಚರಿಸಲಾಗುವುದು. ಅಂದು ಒಂದು ಬಿರಿಯಾನಿ ತೆಗೆದುಕೊಂಡರೆ ಮತ್ತೊಂದನ್ನು ಉಚಿತವಾಗಿ ನೀಡಲಾಗುವುದು ಎಂದು ಜಿ.ಎಫ್.ಸಿ. ಹೋಟೆಲ್ ಮಾಲೀಕ ಪಿ.ಕೆ. ರಘುನಂದನ್ ಹೇಳಿದರು.
ಅವರು ಇಂದು ತಮ್ಮ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಗ್ಗರಣೆ ಡಬ್ಬಿ ಖ್ಯಾತಿಯ ಕೃಷ್ಣಪ್ಪನವರ ಹೋಟೆಲ್ ಇದಾಗಿದೆ. ಈಗಾಗಲೇ ದೇಶದಲ್ಲಿ 200ಕ್ಕೂ ಹೆಚ್ಚು ಈ ರೀತಿಯ ಹೋಟೆಲ್ ಗಳು ಆರಂಭಗೊಂಡಿದೆ. ಶಿವಮೊಗ್ಗದಲ್ಲಿಯೂ ಕೂಡ ಈಗ ಆರಂಭಿಸಲಾಗುತ್ತಿದೆ. ಗುರುವಾರದಂದು ಕೃಷ್ಣಪ್ಪನವರು ಈ ಹೋಟೆಲ್ ನನ್ನು ಉದ್ಘಾಟಿಸುವರು ಎಂದರು.
ಇಲ್ಲಿನ ಬಿರಿಯಾನಿ ಅತ್ಯಂತ ರುಚಿಕರವಾಗಿರುತ್ತದೆ. ಮನೆ ಮಾದರಿಯದ್ದಾಗಿರುತ್ತದೆ. ಯಾವುದೇ ರೀತಿಯ ರಾಸಾಯನಿಕ ಅಂಶಗಳು ಇರುವುದಿಲ್ಲ. ಸಂಪೂರ್ಣ ಮನೆಯಲ್ಲೇ ತಯಾರಿಸಿದ ಅಡಿಗೆಯಾಗಿರುತ್ತದೆ. ಚಿಕನ್ ಬಿರಿಯಾನಿಗೆ 100 ರೂ., ಮಟನ್ ಬಿರಿಯಾನಿಗೆ 150 ರೂ.,ಅರ್ಧ ಕಬಾಬ್ ಗೆ 50 ರೂ., ಪೂರ್ತಿ ಕಬಾಬ್ ಗೆ 100 ರೂ., 1 ಕೆ.ಜಿ. ಕಬಾಬ್ ಗೆ 500ರೂ.ಗಳನ್ನು ನಿಗಧಿಪಡಿಸಲಾಗಿದೆ. 30 ನಿಮಿಷಕ್ಕೆ ಮೊದಲು ಆರ್ಡರ್ ಮಾಡಿದರೆ, ಹೋಂ ಡೆಲೆವರಿ ಕೂಡ ಇರುತ್ತದೆ ಎಂದರು.