ಶಿವಮೊಗ್ಗ ನಗರ ಹಾಗೂ ತುಂಗಾ ನದಿಯಲ್ಲಿ ಸ್ವಚ್ಛ ಸುಂದರಗೊಳಿಸುವ ದೃಷ್ಟಿಯಲ್ಲಿ ಇಂದು
ಸಂಸದರಾದ ಬಿ. ವೈ. ರಾಘವೇಂದ್ರ ಅವರು ಬೆಕ್ಕಿನ ಕಲ್ಮಠ ಸಮೀಪದ ತುಂಗಾ ನದಿಗೆ ಭೇಟಿ
ನೀಡಿ  ಸ್ಮಾರ್ಟ್ ಸಿಟಿ ವತಿಯಿಂದ ತುಂಗಾ ನದಿಗೆ ಅಡ್ಡವಾಗಿ ನಿರ್ಮಾಣಗೊಳ್ಳಬೇಕಿರುವ
ಮಿನಿ ಅಡ್ಡಕಟ್ಟೆಯ ( CONSTRUCTION OF WEIR ACROSS TUNGA RIVER FOR RIVER
FRONT DEVELOPMENT PROJECT ) ಸ್ಥಳವನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿದರು.

ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಉತ್ತರ ದಂಡೆ ಅಭಿವೃದ್ಧಿ ಕಾಮಗಾರಿಯಲ್ಲಿ
ದೋಣಿವಿಹಾರ ವಾಕಿಂಗ್ ಪಾಥ್, Jetty, steps & Ramps to Lower Promenade
ಇತ್ಯಾದಿಗಳಿಗೆ ನಿರಂತರವಾಗಿ ನೀರು ನಿಲುಗಡೆಯ ಅವಶ್ಯಕತೆ ಇರುತ್ತದೆ.  ಆದ್ದರಿಂದ
ತುಂಗಾ ನದಿಗೆ ಅಡ್ಡಲಾಗಿ ಬಂದಾರ( CONSTRUCTION OF WEIR) ನಿರ್ಮಿಸುವ
ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

KSSIDC ಉಪಾಧ್ಯಕ್ಷರಾದ ಎಸ್. ದತ್ತಾತ್ರಿ, ಪಾಲಿಕೆಯ ಮಹಾಪೌರರಾದ ಸುನಿತಾ ಅಣ್ಣಪ್ಪ,
ಉಪ ಮಹಾಪೌರಾರದ ಶಂಕರ್ ಗನ್ನಿ, ಶಿವಮೊಗ್ಗ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ
ನಿರ್ದೇಶಕರಾದ ಚಿದಾನಂದ್ ವಟಾರೆ, ಸಣ್ಣ ನೀರಾವರಿ AEE ಮಂಜುನಾಥ್,ಸ್ಮಾರ್ಟ್ ಸಿಟಿ EE
ಕೃಷ್ಣಪ್ಪ, ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…