ಶಿವಮೊಗ್ಗ: ಗಾಂಧಿಯವರ ಹಿಂದ್ ಸ್ವರಾಜ್ ಕೃತಿ ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಉತ್ಪತ್ತಿಯಾದದ್ದು ಮತ್ತು ಪಾಶ್ಚಿಮಾತ್ಯ ನಾಗರಿಕತೆಯ ಯಜಮಾನ್ಯವನ್ನು ತೀವ್ರವಾಗಿ ಪ್ರಶ್ನಿಸುತ್ತದೆ ಎಂದು ಮಂಗಳ ಗಂಗೋತ್ರಿ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ರಾಜರಾಮ್ ತೊಳ್ಪಾಡಿ ಯವರು ತಿಳಿಸಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸ್ನಾತಕೋತ್ತರ ಇಂಗ್ಲಿಷ್, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಸಂಶೋಧನಾ ಅಧ್ಯಯನ ವಿಭಾಗಗಳು ಸಂಯುಕ್ತ ಆಶ್ರಯದಲ್ಕಿ ಆಯೋಜಿಸಿದ್ದ “ಹಿಂದ್ ಸ್ವರಾಜ್” ಎಂಬ ವಿಷಯದ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತ ಗಾಂದೀಜಿಯವರು ತಮ್ಮ ಹಿಂದ್ ಸ್ವರಾಜ್ ಎಂಬ ಪುಸ್ತಕದಲ್ಲಿ ಪಾಶ್ಚಾತ್ಯ ದೇಶಗಳ ಸಂಸ್ಕೃತಿಯನ್ನು ನಾವು ಅಳವಡಿಸಿಕೊಂಡರೆ ನಮ್ಮ ದೇಶದ ಸಂಸ್ಕೃತಿ ನಾಶವಾಗುತ್ತದೆ ಎಂದು ಗಾಂದೀಜಿಯವರು ಬರೆದ ಪುಸ್ತಕದ ಕುರಿತು ಡಾ.ರಾಜಾರಾಮ್ ರವರು ತಿಳಿಸಿದರು. ಗಾಂದೀಜಿಯವರು ಹೇಳುತ್ತಿದ್ದರು ನಾನು ಯಾವುದನ್ನೂ ಹೊಸದು ಕೊಡುತ್ತಿಲ್ಲ ಇರುವುದನ್ನೆ ಸಂಘಟಿಸಿ ಕೊಡುತ್ತಿದ್ದೇನೆ.
ಆಧುನಿಕತೆಯನ್ನು ವಿಮರ್ಷೆ ಮಾಡುತ್ತ ಪರ್ಯಾಯವಾದ ಅಧುನಿಕತೆಯನ್ನು ತಮ್ಮ ಹಿಂದ್ ಸ್ವರಾಜ್ ಪುಸ್ತಕದಲ್ಲಿ ಮಂಡಿಸಿದ್ದಾರೆ ಎಂದರು.
ಪಾಶ್ಚಿಮಾತ್ಯ ನಾಗರಿಕತೆಯನ್ನು ಗಾಂದೀಜಿಯವರು ನಿರಾಕರಿಸದೆ, ಅದರ ವಿಜ್ಞಾನ-ತಂತ್ರಜ್ಞಾನ ನಿರ್ಮಿಸಿದ ಯಜಮಾನ್ಯದ ಸ್ವರೂಪವನ್ನು ಪ್ರಶ್ನಿಸುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಕೆ.ಬಿ.ಧನಂಜಯ ವಹಿಸಿದ್ದರು.
ರಾಜ್ಯಶಾಸ್ತ್ರದ ಸಂಯೋಜಕರಾದ ಡಾ.ಸತ್ಯನಾರಾಯಣ ಬಿ.ಹೆಚ್ ಇವರು ಸ್ವಾಗತಿಸಿದರು.
ಪ್ರಾಸ್ತಾವಿಕ ವಾಗಿ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಸಂಯೋಜಕರಾದ ಡಾ.ಅವಿನಾಶ್ ಟಿ, ಮಾಡಿದರು.
ವಂದನಾರ್ಪಣೆಯನ್ನು ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ.ಮುದುಕಪ್ಪನವರು ಮಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ದೀಪ್ತಿ ಕುಮಾರಿ ನಿರೂಪಿಸಿದರು.