ಮಂಜುನಾಥ್ ಶೆಟ್ಟಿ…

ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಹೊಸದಾಗಿ ಅನುಷ್ಠಾನಗೊಳಿಸುತ್ತಿರುವ ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಹಿತಿಯನ್ನು ತಿಳಿದುಕೊಳ್ಳಲು ಜ. 31 ರಂದು ಮಧ್ಯಾಹ್ನ 3.00 ಕ್ಕೆ ಶಿಕಾರಿಪುರ ಮತ್ತು ತೀರ್ಥಹಳ್ಳಿ, ಫೆ. 02 ರಂದು ಮಧ್ಯಾಹ್ನ 3.00 ಕ್ಕೆ ಸೊರಬ ಮತ್ತು ಹೊಸನಗರ, ಫೆ. 03 ರಂದು ಮಧ್ಯಾಹ್ನ 3.00 ಕ್ಕೆ ಭದ್ರಾವತಿ ಮತ್ತು ಶಿವಮೊಗ್ಗ ಹಾಗೂ ಫೆ. 04 ರಂದು ಮಧ್ಯಾಹ್ನ 3.00 ಕ್ಕೆ ಸಾಗರ ಉಪನೋಂದಣಿ ಕಚೇರಿಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು, ಪತ್ರ ಬರಹಗಾರರು, ವಕೀಲರು ಹಾಗೂ ಇಚ್ಛೆಯಿರುವ ಎಲ್ಲಾ ನಾಗರೀಕರು ಹಾಜರಾಗುವಂತೆ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Leave a Reply

Your email address will not be published. Required fields are marked *