ಖಾಸಗಿ ಶಾಲೆಗಳು ಕೊರೋನ ಸಂಕಷ್ಟದಲ್ಲಿರುವ ಪೋಷಕರನ್ನ ಲೂಟಿ ಮಾಡಲು ಇಳಿದಿವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಯ ದೇವೇಂದ್ರಪ್ಪ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಸರ್ಕಾರ ಕೊರೋನ ಸಂಕಷ್ಟದಲ್ಲಿ ಇರುವಾಗಲೇ ಶೇ.70 ರಷ್ಟು ಹಣ ತುಂಬಿಸಿಕೊಳ್ಳಿ ಎಂದು ಹೇಳಿದರೂ ಸಹ ಖಾಸಗಿ ಶಾಲೆಗಳು ಶೇ. ೧೦೦ ರಷ್ಟು ಹಣಕಟ್ಟಿಸಿಕೊಂಡಿರುವ ಉದಾಹರಣೆಗಳಿವೆ ಎಂದರು. ಪ್ರಸಕ್ತ ಸಾಲಿನ ಆಡ್ಮಿಷನ್ ಆರಂಭವಾಗಿದ್ದು ಖಾಸಗಿ ಶಾಲೆಗಳು ಡೊನೇಷನ್ ಮತ್ತು ಇತರೆ ಎಲ್ಲಾ ಶುಲ್ಕದ ಭಾರವನ್ನ ಪೋಷಕರ ಮೇಲೆ ಹಾಕಲು ಮುಂದಾಗಿವೆ. ಇಂತಹದ್ದರ ಬಗ್ಗೆ ಸರ್ಕಾರ ಕಡಿವಾಣಹಾಕಬೇಕು ಎಂದರು. ಶಾಲೆಗಳಲ್ಲಿ ಬಡ್ಡಿಕೊಡಲಾಗುತ್ತಿದೆ ಎಂಬ ಸುದ್ದಿಗಳು ಹರಡುತ್ತಿವೆ. ಇಂಟಲಿಜೆನ್ಸಿ ವರದಿಗಳು ಸರ್ಕಾರದ ಬಳಿ ಇವೆ. ಇದನ್ನ ಕಡಿವಾಣ ಹಾಕುವ ಬದಲು ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಟೀಕಿಸಿದರು. ಜನ ಹೊರಗಡೆ ಹೋದರೆ ದಂಡ ಹಾಕಿ ಮನೆಯಲ್ಲಿರಿ ಎನ್ನತ್ತದೆ. ಶಾಲೆಗಳಲ್ಲಿ ಬಡ್ಡಿ ಕೊಡುವ ಮೂಲಕ ಪೋಷಕರನ್ನ ಹಿಂಸಿಸುತ್ತದೆ. ಹಾಗಾಗಿ ಇದು ಬಡ್ಡಿ ಮತ್ತು ದಂಡದ ಸರ್ಕಾರವೆಂದು ಟೀಕಿಸಿದರು. ಖಾಸಗಿ ಶಾಲೆಗಳು ಬಡ್ಡಿ ನೀಡುವ ಮೂಲಕ ದಾಖಲಾತಿ ಆರಂಭಿಸಿದರೆ ನಮ್ಮ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಐಎನ್ ಟಿಯುಸಿಯ ಮಹಿಳಾ ಅಧ್ಯಕ್ಷೆ ಕವಿತಾ, ರಾಘವೇಂದ್ರ, ಅರ್ಜುನ್, ನಿಹಾಲ್ ಸಿಂಗ್, ಜಾನ್ ಭರತ್  ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ