ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ಆಚರಿಸಲಾಯಿತು.

ಗಿಡಕ್ಕೆ ನೀರು ಹಾಕುವುದರ ಮೂಲಕ ಶ್ರೀಮತಿ ವಿಶಾಲಾಕ್ಷಿಯವರು ಸಮಾರಂಭವನ್ನು ಉದ್ಟಾಟಿಸಿ ಸಭೆಯನ್ನು ಉದ್ಧೆಶಿಸಿ- ಯತ್ರ ನಾರ್ಯಂತು ಪೂಜ್ಯಂತೆರಮAತೆತತ್ರದೇವತಃ|| ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸುತ್ತಾನೆ. ನಮ್ಮ ದೈನಂದಿನ ಕಾರ್ಯಗಳೆಲ್ಲವೂ ನಾರಿಯಿಂದಲೇ ಪ್ರಾರಂಭವಾಗುತ್ತದೆ, ನ್ಯಾಯದೇವತೆ, ಧನಲಕ್ಷಿ÷್ಮ, ಜಯಲಕ್ಷಿ÷್ಮ, ಧಾನ್ಯಲಕ್ಷಿ÷್ಮ, ಭೂದೇವಿ, ಅನ್ನಪೂರ್ಣೆ ಹೀಗೆ ಎಲ್ಲರಲ್ಲೂ ನಮ್ಮ ಹಿರಿಯರು ಕಂಡದ್ದು ಸ್ತಿçಯನ್ನೆ. ಮನೆಯೆ ಮೊದಲ ಪಾಠ ಶಾಲೆ ಜನನಿ ತಾನೆ ಮೊದಲ ಗುರು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಈಗ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಮುಕ್ತ ಅವಕಾಶಗಳನ್ನು ನೀಡಲಾಗುತ್ತಿದೆ, ಸಾಹಿತ್ಯ, ಕಲೆ, ಕ್ರೀಡೆ, ಆಧ್ಯಾತ್ಮಾ, ತಾಂತ್ರಿಕವಾಗಿ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಮುಂದು ವರೆದಿದ್ದಾರೆ ಮತ್ತು ಮಿಂಚುತಿದ್ದಾರೆ.

ಮಹಿಳೆಯರು ಸಂಘಟಿತರಾಗಲು ಒಂದು ದಿನವಾದರು ಮಿಸಲಿಡಬೇಕು ಎನ್ನುತ್ತಾ ಮಹಿಳಾ ದಿನಾಚರಣೆ ಹೇಗೆ ಪ್ರಾರಂಭವಾಯಿತು ಎಂದು ಸವಿಸ್ತಾರವಾಗಿ ವಿವರಿಸಿ ಈಗಿನ ಕಾಲದ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ, ಸಾಧಕ ಮಹಿಳೆಯರು ಎಲ್ಲೆಲ್ಲೂ ಇದ್ದರೆ ಅವರನ್ನು ಗುರುತಿಸಬೇಕು ಹಾಗೂ ಗೌರವಿಸಬೇಕು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸ್ಕೌಟಿಂಗ್ ಮತ್ತು ಗೈಡಿಂಗ್‌ನಲ್ಲಿ ಸೇವೆ ಸಲ್ಲಿಸುತ್ತೀರುವ ೧೩ ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು.

ಅವರಲ್ಲಿ ಶಿವಮೊಗ್ಗದ ಸ. ಹಿ. ಪ್ರಾ. ಶಾಲೆ, ಐಹೊಳೆ, ಶ್ರೀಮತಿ ರೇಣುಕಾ. ಎಲ್, ಸ. ಹಿ. ಪ್ರಾ. ಶಾಲೆ, ಸೂಳೆಬೈಲು, ಶ್ರೀಮತಿ ಗೀತಾಚಿಕ್ಕಮಠ, ಜಂಟಿ ನಿರ್ದೇಶಕರ ಕಛೇರಿಯ ರೇಂಜರ್ ಲೀಡರ್ ಶ್ರೀಮತಿ ಅನಿತ. ವಿ, ಸ.ಹಿ.ಪ್ರಾ.ಶಾಲೆ, ವಡೇರಕೊಪ್ಪದ ಶ್ರೀಮತಿ ಕಾತ್ಯಾಯಿನಿ, ಸಾಗರದ ಹೊಂಗಿರಣ ಶಾಲೆಯ ಶ್ರೀಮತಿ ಮಧುರ ಬಿ. ಪಾಲನ್, ಸ.ಹಿ.ಪ್ರಾ. ಶಾಲೆ, ಗೆಣಸಿನಕುಣಿಯ ಶ್ರೀಮತಿ ಶಾರದ, ಭದ್ರಾವತಿಯ ಸ.ಹಿ.ಪ್ರಾ.ಶಾಲೆ, ಹುಣಸೇಕಟ್ಟೆಯ ಶ್ರೀಮತಿ ಅನಿತಾ ಮೇರಿ, ಸ.ಬಾ.ಹಿ.ಪ್ರಾ. ಶಾಲೆ, ನ್ಯೂಟೌನ್‌ನ ಶ್ರೀಮತಿ ನೂರ್ ಫಾತಿಮ, ತೀರ್ಥಹಳ್ಳಿಯ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆ, ಮೇಗರವಳ್ಳಿಯ ಶ್ರೀಮತಿ ಸಿಸಿಲಿಯಾ, ಸ.ಹಿ.ಪ್ರಾ.ಶಾಲೆ, ದುರ್ವಾಸಪುರಂನ ಶ್ರೀಮತಿ ಜಯಲಕ್ಷಿ÷್ಮ, ಶಿಕಾರಿಪುರದ ಸ. ಪ್ರೌ. ಶಾಲೆ, ಗಾಮದ ಶ್ರೀಮತಿ ಶೋಭಾದೇವಿ, ಸ.ಪ.ಪೂ.ಕಾಲೇಜು, ಈಸೂರಿನ ಶ್ರೀಮತಿ ಭಾಗ್ಯವತಿ ಮತ್ತು ಸೊರಬದ ಸ. ಹಿ. ಪ್ರಾ. ಶಾಲೆ, ತೊರವಂದದ ಶ್ರೀಮತಿ ಜ್ಯೋತಿಯವರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ರವರು ಮಾತನಾಡುತ್ತಾ ಒಂದು ವಾಕ್ಯ ಅರ್ಥಪೂರ್ಣ ವಾಗಲು ಪದಗಳು ಎಷ್ಟು ಮುಖ್ಯವೋ, ಲೇಖನಾ ಚಿಹ್ನೆಗಳು ಅಷ್ಟೇ ಮುಖ್ಯ. ಪುರುಷರು ಪದಗಳಾದರೆ, ಮಹಿಳೆಯರು ಲೇಖನ ಚಿಹ್ನೆಯಂತೆ. ನಮ್ಮ ಜೀವನ ಅರ್ಥಪೂರ್ಣವಾಗಬೇಕಾದರೆ, ಪುರುಷರು- ಸ್ತಿçಯರು ಸಮಾನ ರಂತೆ ಕಾಣಬೇಕು. ಮಹಿಳೆಯರ ಅನುಕೂಲಕ್ಕಾಗಿ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ, ಆ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ತಿç-ಪುರುಷ ಸಮಾನತೆಯ ಕುರಿತು ಹೆಚ್ಚಿನ ಗಮನ ಕೊಡಬೇಕು. ಮಹಿಳೆಯರ ರಕ್ಷಣೆ ಅತ್ಯವಶ್ಯಕ, ಕಾನೂನು ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಅರಿವು ಅವಶ್ಯಕ. ಹೆಣ್ಣು ಮಕ್ಕಳು ದೌರ್ಜನ್ಯ ಮುಕ್ತವಾಗಬೇಕು. ಅರಿವಿನ ಶಿಕ್ಷಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಅನಿವಾರ್ಯ ಎಂದರು.

ಈ ಸಮಾರಂಭಕ್ಕೆ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತಿç ರವರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಭಾರತಿ ಚಂದ್ರಶೇಖರ್ ರವರು ಮಾತನಾಡಿ ಎಲ್ಲರಿಗೂ ಶುಭಕೋರಿದರು. ಮಹಿಳೆಯರಿಗೆ ಆಟೋಟ ಸ್ಪರ್ಧೇಯನ್ನು ಹಮ್ಮೀಕೊಂಡಿದ್ದು ಗೆದ್ದವರಿಗೆ ಬಹುಮಾನವನ್ನು ವಿತರಿಸಲಾಯಿತು. ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ್‌ಎಲ್.ಟಿ ರವರು ಸಮಾರಂಭಕ್ಕೆ ಸ್ವಾಗತವನ್ನು ಕೋರಿದರು, ವಂದನೆಯನ್ನು ಶ್ರೀಮತಿ ಗೀತಾ ಚಿಕ್ಕಮಠ ರವರು ನಿರ್ವಹಿಸಿದರು, ನಿರೂಪಣೆಯನ್ನು ಸಹನಾ ಚೇತನ್ ರವರು ನಿರ್ವಹಿಸಿದರು, ಈ ಸಮಾರಂಭಕ್ಕೆ ಪಿ.ಆರ್.ಒ ಶ್ರೀ ವಿಜಯಕುಮಾರ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು ಕಾಲೇಜಿನ ಉಪನ್ಯಾಸಕರು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೇಂರ‍್ಸ್ ಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…