ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ ರೋಗಿಗಳ ಸಂಬಂಧಿಕರನ್ನು ಒಳಗೆ ಬಿಡದೆ ಇದ್ದುದರಿಂದ ಆಡಳಿತ ಮಂಡಳಿ ಹಾಗೂ ರೋಗಿಗಳ ಸಂಬಂಧಿಕರ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ಮಧ್ಯೆ ಮಾತನಾಡಿದ ಕೆಲವು ರೋಗಿಗಳ ಸಂಬಂಧಿಕರು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಕೊಡಬೇಕು ಪ್ರಸ್ತುತ ಇಲ್ಲದ ಔಷಧಿಗಳನ್ನು ನಮಗೆ ಹೊರಗಿಂದ ತರಲು ಬರೆದುಕೊಡುತ್ತಿದ್ದಾರೆ. ನಮ್ಮನ್ನು ಒಳಗೆ ಬಿಡಲಿಲ್ಲ ಆದರೆ ಈ ಔಷಧಿಗಳನ್ನು ತಂದು ಕೊಡೋರು ಯಾರು ? ಇದರಿಂದ ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಹೊಣೆ ? ವಾರ್ಡ್ ನಲ್ಲಿ ಇರುವ ನರ್ಸ್ ಗಳ ಹಾಗೂ ಡಿ ಗ್ರೂಪ್ ನೌಕರರ ಸಂಖ್ಯೆ ಕಡಿಮೆ ಇದೆ ಇದೆ ಹಾಗಾಗಿ ಅಷ್ಟು ಜನ ರೋಗಿಗಳನ್ನು ನೋಡಿಕೊಳ್ಳಲು ಇರುವ ಸ್ಟಾಫ್ ಸಾಕಾಗುವುದಿಲ್ಲ. ಏನಾದರೂ ಅನಾಹುತ ಸಂಭವಿಸಿದರೆ ಆಸ್ಪತ್ರೆಯ ನೇರ ಹೊಣೆ ಎಂದು ಹೇಳಿದರು. ಕೆಲವರಂತೂ ಆಸ್ಪತ್ರೆಯಲ್ಲಿ ಆಗದಿದ್ದರೆ ಈಗಲೇ ಡಿಸ್ಚಾರ್ಜ್ ಮಾಡಿ ನಮಗೆ ನಮ್ಮವರ ಪ್ರಾಣ ಮುಖ್ಯ ಎಂದು ತಮ್ಮ ನೋವನ್ನು ತೋಡಿಕೊಂಡರು.
ಪರಿಸ್ಥಿತಿ ಕೈ ಮೀರಿದಾಗ ಮಧ್ಯ ಪ್ರವೇಶಿಸಿದ Dysp ಪ್ರಶಾಂತ್ ಮುನೋಳಿ ಹಾಗೂ ಹರೀಶ್ ಪಾಟೀಲ್ ದೊಡ್ಡಪೇಟೆ ಇನ್ಸ್ ಪೆಕ್ಟರ್ ಹರೀಶ್ ರವರು ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153