ಶಿವಮೊಗ್ಗ: ಪೈಪ್ ಕಾಂಪೋಸ್ಟ್ ಪದ್ಧತಿ ಅಳವಡಿಸಿಕೊಂಡು ಸರಳ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದರಿಂದ ಸ್ವಚ್ಛ ವಾತಾವರಣ ನಿರ್ಮಿಸುವ ಜತೆಯಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಬಹುದಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಜಿ. ರಾಮಚಂದ್ರಮೂರ್ತಿ ಹೇಳಿದರು.
ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಭೇಟಿ ನೀಡಿ ನಂತರ ಮಿಷನ್ ಕಾಂಪೌAಡ್ ಪಾರ್ಕ್ನಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೈಪ್ ಕಾಂಪೋಸ್ಟ್ ಪದ್ಧತಿ ಅಳವಡಿಸಿ ಹಸಿ ಕಸವನ್ನು ಕಾಂಪೋಸ್ಟ್ನಲ್ಲಿ ಹಾಕಿ ಅದರಿಂದ ಬರುವ ಗೊಬ್ಬರವನ್ನು ಪಾರ್ಕಿಗೆ ಬಳಸುವುದು ಅತ್ಯಂತ ಅರ್ಥಪೂರ್ಣ ಕೆಲಸ ಆಗಿರುತ್ತದೆ. ಎಲ್ಲ ಸಾರ್ವಜನಿಕರು ಪೈಪ್ ಕಾಂಪೋಸ್ಟ್ ಬಳಸಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದನೆ ಮಾಡಿದಲ್ಲಿ ಪರಿಸರ ಕಲುಷಿತ ಆಗುವುದನ್ನು ತಡೆಗಟ್ಟಬಹುದಾಗಿದೆ. ನಗರದ ಎಲ್ಲಾ ಪಾರ್ಕಿನಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಸಿ ಒಣ ಕಸ ಮತ್ತು ಹಸಿ ಕಸದಿಂದ ಗೊಬ್ಬರ ಸಿಗುವ ರೀತಿ ಮಾಡುವುದು ಎಲ್ಲ ಸಂಘ ಸಂಸ್ಥೆಗಳ ಜವಾಬ್ದಾರಿ ಆಗಿರುತ್ತದೆ. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಒಳ್ಳೆಯ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಪೈಪ್ ಕಾಂಪೋಸ್ಟ್ ಪದ್ಧತಿ ರೂವಾರಿ ಮಹಾದೇವಸ್ವಾಮಿ ಮಾತನಾಡಿ, ಎಲ್ಲಾ ಬಡಾವಣೆಗಳು ಹಾಗೂ ಪಾರ್ಕ್ಗಳಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಸಿ ಹಸಿ ಕಸವನ್ನು ನಾವು ಹಾಕುತ್ತಾ ಬಂದರೆ ನಮಗೆ ಒಳ್ಳೆಯ ಗೊಬ್ಬರ ಸಿಗುತ್ತದೆ. ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ಹಲವಾರು ಪಾರ್ಕ್ಗಳು ಆಗುತ್ತಿದ್ದು, ಹಲವಾರು ರೋಟರಿ ಸಂಸ್ಥೆಗಳು ದತ್ತು ಪಡೆದು ಪಾರ್ಕಿನ ಪೋಷಣೆ ಹಾಗೂ ಸ್ವಚ್ಛತೆ ಜವಾಬ್ದಾರಿ ತೆಗೆದುಕೊಂಡರೆ ಶಿವಮೊಗ್ಗ ನಗರ ಸ್ವಚ್ಛ ನಗರವಾಗಿ ಮಾಡುವುದು ಸುಲಭವಾಗುತ್ತದೆ ಎಂದು ತಿಳಿಸಿದರು.
ಹೋಟೆಲ್ ಶುಭಂ ಮಾಲೀಕರಾದ ಉದಯ್ ಕದಂಬ ಹಾಗೂ ಚಂದ್ರಹಾಸ್ ಶೆಟ್ಟಿ ಅವರು ಪಾರ್ಕಿನ ಸ್ವಚ್ಛತೆ ಹಾಗೂ ಅಭಿವೃದ್ಧಿ ಮಾಡುತ್ತಿದ್ದು, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿAದ ಪಾರ್ಕ್ನಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಸಲಾಯಿತು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ, ಕಾರ್ಯದರ್ಶಿ ಸತೀಶ್ ಚಂದ್ರ, ಜಿ.ವಿಜಯ್ ಕುಮಾರ್, ಚಂದ್ರಹಾಸ್ ಶೆಟ್ಟಿ, ಉದಯ್ ಕದಂಬ, ವಸಂತ್ ಹೋಬಳಿದಾರ್, ಕುಮಾರಸ್ವಾಮಿ, ಎಲ್.ಟಿ.ತಿಮ್ಮಪ್ಪ, ಗುರುರಾಜ್ ಮತ್ತು ಇತರ ಸದಸ್ಯರು ಹಾಜರಿದ್ದರು.