ಜಿಲ್ಲಾದ್ಯಂತ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಯು ಸುಗುಮವಾಗಿ ನಡೆಯಲು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ೨೫,೦೦೦ ಮಾಸ್ಕಗಳನ್ನು ಇಂದು ಬೆಳಿಗ್ಗೆ ಜಿಲ್ಲಾ ಸ್ಕೌಟ್ ಭವನದಲ್ಲಿ ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ ರಮೇಶ ಶಾಸ್ತಿ ಹಾಗೂ ಉಳಿದ ಪದಾಧಿಕಾರಿಗಳು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾನ್ಯ ಶ್ರೀ ಎನ್.ಎಮ್.ರಮೇಶ ರವರಿಗೆ ಮಾಸ್ಕಗಳನ್ನು ಹಸ್ತಾಂತರಿಸಲಾಯಿತು.

ಈ ಒಂದು ಸಂದರ್ಭದಲ್ಲಿ ಉಪನಿರ್ದೇಶಕರು ಮಾತನಾಡುತ್ತಾ ಸೇವೆಗೆ ಮತ್ತೊಂದು ಹೆಸರೆ ಸ್ಕೌಟ್ಸ್ ಮತ್ತು ಗೈಡ್ಸ್, ಕಳೆದ ೨ ವರ್ಷದಿಂದ ನಿರಂತರವಾಗಿ ಮಾಸ್ಕಗಳನ್ನು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಸ್ವಯಂ ಸೇವಕರುಗಳನ್ನು ಪ್ರತಿ ತಾಲ್ಲೂಕಿನಿಂದ ನಿಯೋಜಿಸಿ ಪರೀಕ್ಷೆಗಳು ಆರೋಗ್ಯಯುತವಾಗಿ ನಡೆಸಿ ಕೋಡಲು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿAದ ನೇರವಾಗಿರುತ್ತೀರಾ ಅದೇ ರೀತಿ ಈ ವರ್ಷವೂ ನಮಗೆ ಮಾಸ್ಕಗಳನ್ನು ನೀಡಿ ಸಹಕರಿಸಿದ್ದಿರಾ ಸ್ಕೌಟ್ಸ್ ಮತ್ತು÷ಗೈಡ್ಸ್ ಸಂಸ್ಥೆ ಶಿಕ್ಷಣ ಸಂಸ್ಥೆಯ ಅವಿಭಾಜ್ಯ ಅಂಗವಾಗಿದೆ. ಶಿವಮೊಗ್ಗ ಅಷ್ಟೆ ಅಲ್ಲದೆ ಭಾರತದ ಎಲ್ಲೆಡೆ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಶಿಕ್ಷಣ ಇಲಾಖೆ ಮತ್ತು ಸರ್ಕಾರದ ಕಾರ್ಯಗಳಲ್ಲಿ ಸಹಾಯ ಹಸ್ತವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ ಇಲಾಖೆಗೆ ತುಂಬು ಹೃದಯದಿಂದ ಸಹಾಯ ಮಾಡಿದ ಶಿವಮೊಗ್ಗ ಜಿಲ್ಲಾ ಸಂಸ್ಥೆಗೆ ನಮ್ಮ ಶಿಕ್ಷಣ ಇಲಾಖೆ ವತಿಯಿಂದ ತುಂಬಾ ಹೃದಯದ ಧನ್ಯವಾದಗಳು ಎಂದು ತಿಳಿಸಿದರು.

ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತಿç ಮಾತನಾಡುತ್ತಾ ಮಾನ್ಯ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್.ಸಿಂಧ್ಯ ರವರ ಮಾರ್ಗದರ್ಶನದಂತೆ ನಮ್ಮ ಜಿಲ್ಲೆಯಲ್ಲಿ ಪ್ರತಿಯೊಂದು ಕಾರ್ಯಕ್ರಮವನ್ನು ತಪ್ಪದೆ ನಿರ್ವಹಿಸುತ್ತಿದ್ದು ಜಿಲ್ಲೆಯ ಪ್ರತಿ ಕಾರ್ಯಚಟುವಟಿಕೆಗಳಿಗೆ ಉಪನಿರ್ದೇಶಕರು ಸಹಕಾರವನ್ನು ನೀಡುತ್ತಿರುವುದರಿಂದ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಯಸಶ್ವಿಯಾಗಿ ನಿರ್ವಹಿಸುತ್ತಿದ್ದೇವೆ, ಅದೇ ರೀತಿ ಮುಂದಿನ ದಿನಗಳಲ್ಲಿಯು ವಿದ್ಯಾ ಇಲಾಖೆಯವರ ಸಹಾಯ ಸಹಕಾರವನ್ನು ಬಯಸುತ್ತೇವೆ ಹಾಗೂ ಕಳೆದ ೨ ವರ್ಷದಂತೆ ಈ ವರ್ಷವು ಎಸ್.ಎಸ್.ಎಲ್.ಸಿ ಪರೀಕ್ಷೆಯು ಆರೋಗ್ಯಯುತವಾಗಿ ಯಸಶ್ವಿಯಾಗಿ ನಡೆಯಲೆಂದು ಸ್ಕೌಟ್ ಗೈಡ್ ಸಂಸ್ಥೆಯ ಪರವಾಗಿ ಶುಭಹಾರೈಸಿದರು.

ಈ ಕಾರ್ಯಕ್ರಮಕ್ಕೆ ಜಿಲ್ಲಾ ಗೈಡ್ ಆಯುಕ್ತರಾದ ಶ್ರಿಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಇ ಪವಾರ, ಜಿಲ್ಲಾ ಕಾರ್ಯದರ್ಶಿ ಶ್ರೀ ಹೆಚ್.ಪರಮೇಶ್ವರ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ್, ಪಿ.ಆರ್.ಒ ಶ್ರೀ ವಿಜಯಕುಮಾರ, ಡಿಟಿಸಿ ಶ್ರೀಮತಿ ಸಿ.ಎಸ್.ಕಾತ್ಯಾಯಿನಿ, ಎಲ್.ಎ ಕಾರ್ಯದರ್ಶಿ ಶ್ರೀ ನೂರ್ ಅಹಮದ್, ಎ.ಎಲ್.ಟಿಗಳಾದ ಹೆಚ್. ಶಿವಶಂಕರ್, ಎ.ವಿ.ರಾಜೇಶ, ಸಿ.ಎಂ.ಪರಮೇಶ್ವರ್, ಎಡಿಸಿ ಶ್ರೀನಿವಾಸ ವರ್ಮಾ ದೀಪು ಹಾಗೂ ರೇಂರ್ಸ್ಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…