ಶಿವಮೊಗ್ಗ: ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿಂದು ಉದ್ದಿಮೆಶೀಲ ಅಭಿವೃದ್ಧಿ ವಿಭಾಗವನ್ನು ಕೈಗಾರಿಕೋದ್ಯಮಿ ನಿವೇದನ್ ನೆಂಪೆ ಉದ್ಘಾಟನೆ ಮಾಡಿದರು.ನಂತರ ಅವರು ಮಾತನಾಡಿ, ಉದ್ದಿಮೆದಾರರನ್ನು ಅಭಿವೃದ್ಧಿಪಡಿಸುವಲ್ಲಿ ವ್ಯಕ್ತಿಯಲ್ಲಿರುವ ಸಾಮಾನ್ಯ ಜ್ಞಾನ ಮತ್ತು ಧೈರ್ಯವೇ ಮುಖ್ಯ ವಿನಹ ನಾವು ಪಡೆಯುವ ಪದವಿಗಳಿಂದಲ್ಲ. ವ್ಯವಹಾರ ಪ್ರಾರಂಭಿಸಲು ಕೌಶಲ್ಯ ಮುಖ್ಯ. ಹಣವೊಂದೇ ಮುಖ್ಯವಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಡಿಐಸಿಯ ವೀರೇಶ್ ನಾಯ್ಕ್ ಮಾತನಾಡಿ, ಹೊಸ ಉದ್ದಿಮೆದಾರರಿಗೆ ಸರ್ಕಾರದ ಸೌಲಭ್ಯವನ್ನು ಮತ್ತು ಸವಲತ್ತುಗಳ ಕುರಿತಾಗಿ ಮಾಹಿತಿ ನೀಡಿದರು.ಪ್ರಭಾರ ಪ್ರಾಚಾರ್ಯ ಡಾ. ಕುಂದನ್ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಎಂ. ಮಮತಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.