ಶಿಕ್ಷಣ ಸಚಿವರು ಶೈಕ್ಷಣಿಕ ವರ್ಷದಲ್ಲಿ ಶಾಲೆ ಪ್ರಾರಂಭ ಮಾಡಲು ಆದೇಶ ನೀಡಿರುತ್ತಾರೆ .ಆದುದರಿಂದ ಕಳೆದ ವರ್ಷದಿಂದ ಈ ವರ್ಷವೂ ಸೇರಿದಂತೆ ಕರೋನ ಮಹಾಮಾರಿ ಸಾಂಕ್ರಾಮಿಕ ರೋಗ ಹೆಚ್ಚಾಗಿ ಹರಡುತ್ತಿದ್ದು ಈ ಮುಂಬರುವ ದಿನಗಳಲ್ಲಿ ಕೊರೋನಾ 3 ನೇ ಅಲೆಯೂ ಬರುತ್ತಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ 350 ಮಕ್ಕಳಿಗೆ ಕೊರೊನ ರೋಗವು ಬಂದಿರುತ್ತದೆ . ರಾಜ್ಯ ಸರ್ಕಾರದಿಂದ ನೀಡುತ್ತಿರುವ ಲಸಿಕೆ ಮಕ್ಕಳಿಗೆ ಮತ್ತು ತಂದೆ ತಾಯಿಗಳಿಗೆ ಹಾಗೂ ವಯಸ್ಸಾದ ವೃದ್ಧರಿಗೆ ಪೂರ್ಣ ಪ್ರಮಾಣದಲ್ಲಿ ರಾಜ್ಯ ಸರ್ಕಾರವು ಲಸಿಕೆ ನೀಡಿರುವುದಿಲ್ಲ ಮತ್ತು ಖಾಸಗಿ ಶಾಲೆಗಳಿಗೆ ಮಕ್ಕಳು ಹೋಗುವುದರಿಂದ ಡೊನೇಶನ್ ಹಾವಳಿ ಹೆಚ್ಚಾಗಿರುತ್ತದೆ . ಈಗಾಗಲೇ ಆನ್ ಲೈನ್ ಕ್ಲಾಸ್ ನಡೆಸುತ್ತಿದ್ದು ಫೋನ್ ಮೂಲಕ ಪೋಷಕರಿಗೆ ಡೊನೇಷನ್ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ . ಕಳೆದ 50 ದಿನಗಳಿಂದ ಲಾಕ್‌ ಡೌನ್ ಇರುವುದರಿಂದ ಪೋಷಕರು ಜೀವನ ನಡೆಸಲು ಕಷ್ಟವಾಗಿದೆ. ಕೊರೋನಾ ರೋಗವು ಮುಕ್ತವಾಗುವ ತನಕ ಶಾಲೆಗಳನ್ನು ಪ್ರಾರಂಭಿಸುವುದು ಬೇಡವೆಂದು ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದರು .

ಈ ಸಂದರ್ಭದಲ್ಲಿ ವಾಟಾಳ್ ಮಂಜುನಾಥ್ ಅಧ್ಯಕ್ಷರು , ಜಿಲ್ಲಾ ಕಾರ್ಯದರ್ಶಿ ನಿತಿನ್ ರೆಡ್ಡಿ , ಪ್ರಧಾನ ಕಾರ್ಯದರ್ಶಿ ಪೈ. ರವಿ , ನಗರ ಅಧ್ಯಕ್ಷರು ಲೋಕೇಶ್ , ರಾಘವೇಂದ್ರ ಬಿ ಆರ್ , ನಗರ ಕಾರ್ಯದರ್ಶಿ ಸೋಮಶೇಖರ್ , ನಗರ ಸಂಚಾಲಕರು ಅಕ್ಬರ್ ಬಾಷಾ , ಉಪಸ್ಥಿತರಿದ್ದರು
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153