ಇಂದು ಮುಂಜಾನೆ ಸುಮಾರು 3 ಗಂಟೆಗೆ ನಗರದ ಕೆ. ಆರ್ ಪುರಂ ರಸ್ತೆಯಲ್ಲಿರುವ ಸುಮಾರು 40 ವರ್ಷಗಳ ಹಳೆಯದಾದ ವಂದನಾ ಚಿತ್ರಮಂದಿರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಾಕ ತಂಡದವರು ಬಂದು ಬೆಂಕಿ ನಂದಿಸಿದ್ದಾರೆ ಆದರೂ ಅದರ ದಟ್ಟ ಹೊಗೆ ಈಗಲೂ ಸುತ್ತುವರೆದಿದ್ದು ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆಮಾಡಿದೆ. ಇದು ಕಳೆದ 18 ವರ್ಷಗಳಿಂದಲೂ ಖಾಲಿ ಇದ್ದು ಸುತ್ತಮುತ್ತಲಿನಲ್ಲಿ ಗಿಡಗಂಟೆಗಳು ಬೆಳೆದು ಪುಂಡಪೋಕಾರಿಗಳಿಗೆ ಅಡ್ಡೆಯಾಗಿರುವುದು ಇಲ್ಲಿನ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಭಂದ ಪಟ್ಟ ಅಧಿಕಾರಿಗಳು ಕೂಡಲೇ ಎಚೆತ್ತು ಸಮಸ್ಯ ಬಗೆಹರಿಸಬೇಕೆಂಬುದು ಇಲ್ಲಿನ ಜನರ ಒತ್ತಾಯವಾಗಿದೆ..
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153