ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಡಳಿತ ಮಂಡಳಿ ನಿಯೋಗ ಶಿವಮೊಗ್ಗ ಮಹಾನಗರಪಾಲಿಕೆಯ ಆಯುಕ್ತರಾಗಿ ನೂತನವಾಗಿ ಆಗಮಿಸಿರುವ ಶ್ರೀ ಮಾಯಣ್ಣಗೌಡರವರನ್ನು ಮುಹಾನಗರಪಾಲಿಕೆ ಕಚೇರಿಯಲ್ಲಿ ಸೌಹಾರ್ದಯುತ ಬೇಟಿನೀಡಿ, ಸಂಘದ ಅಧ್ಯಕ್ಷರಾದ ಶ್ರೀ ಎನ್. ಗೋಪಿನಾಥ್‌ರವರು ಹೂಗುಚ್ಚ ನೀಡಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಆಯುಕ್ತರು, ಶಿವಮೊಗ್ಗ ನಗರ ಸ್ವಚ್ಚ-ಸುಂದರ ನಗರವನ್ನಾಗಿಸಲು, ಜನತೆಯ ಕುಂದುಕೊರತೆಗಳ ಪರಿಹಾರೋಪಾಯಗಳ ಬಗ್ಗೆ ಸರ್ಕಾರದ ಸೇವಕನಾಗಿ ಕಾನೂನಿನ ಚೌಕಟ್ಟಿನೊಳಗೆ ಜನತೆಯ ತೊಂದರೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನಿಯೋಗದಿಂದ ಟ್ರೇಡ್-ಲೈಸೆನ್ಸ್ ಸಮಸ್ಯೆ ಬಗ್ಗೆ ಗಮನಕ್ಕೆ ತಂದಾಗ ಆ ಬಗ್ಗೆ ಪೂರ್ಣ ವಿವರ ಪಡೆದು ವ್ಯತ್ಯಾಸಗಳೇನದರೂ ಇದ್ದಲ್ಲಿ ವಾಣಿಜ್ಯೋದ್ಯಮಿಗಳ ಕುಂದುಕೊರತೆಗಳನ್ನು ಕಾನೂನುನಡಿಯಲ್ಲಿ ನ್ಯಾಯಯುತವಾಗಿ ತೊಂದರೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಆಟೋ ಕಾಂಪ್ಲೆಕ್ಸ್ ನಿವೇಶನಗಳ ಕೆ.ಐ.ಎ.ಡಿಬಿ ಯಿಂದ ಮಹಾನಗರ[ಪಾಲಿಕೆಗೆ ಹಸ್ಥಾಂತರಿಸುವ ಕಾರ್ಯ ತುಂಬಾ ದಿನಗಳಿಂದ ನೆನೆಗುದಿಗೆಬಿದ್ದಿದ್ದು, ಕೈಗಾರಿಕಾ ವಸಹಾತುವಿನಲ್ಲಿ ಯಾವುದೇ ಅಭಿವೃದ್ದಿಕಾರ್ಯಗಳು, ನವೀಕರಣ ಇತ್ಯಾದಿ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ. ಕೈಗಾರಿಕೋದ್ಯಮಿಗಳ ಸಮಸ್ಯೆಯನ್ನು ಕೆ.ಐಎ.ಡಿಬಿಯಿಂದ ನಿವೇಶನ ಹಂಚಿಕೆಯಾದAದಿನಿAದ ಇಲ್ಲಿಯವರೆಗಿನ ಪೂರ್ಣ ದಾಖಲಾತಿಗಳನ್ನು ಮಹಾನಗರಪಾಲಿಕೆಗೆ ಒದಗಿಸಿದಲ್ಲಿ ಅವುಗಳನ್ನು ಪರಿಶೀಲಿಸಿ ಅವುಗಳ ಖಾತೆ ಬದಲಾವಣೆ, ಹಾಗೂ ಹಸ್ತಾಂತರ ಕಾರ್ಯವನ್ನು ಮಾಡಿಕೊಡುವುದಾಗಿ ತಿಳಿಸಿದರು.
ಈ ಸಂಧರ್ಬದಲ್ಲಿ ಉಪ-ಆಯುಕ್ತ(ಅಡ್ಮಿನ್) ಶ್ರೀ ಪ್ರಮೋದ್ ಹೆಚ್.ಪಿ, ಉಪ-ಆಯುಕ (ರೆವೆನ್ಯೂ) ಶ್ರೀ ನಾಗೇಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ರವರುಗಳಾದ ಅಮೋಘ್, ಮಹದೇವಮ್ಮ, ಕಚೇರಿಯ ರೆವೆನ್ಯೂ ಅಧಿಕಾರಿಗಳು ವಾಣಿಜ್ಯ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಸ್ವಚ್ಚ ಶಿವಮೊಗ್ಗ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಸಮಿತಿ ಛರ‍್ಮನ್ ಶ್ರೀ ಕೆ.ಎಸ್. ಸುಕುಮಾರ್, ಸಹಕಾರ್ಯದರ್ಶಿ ಜಿ. ವಿಜಯಕುಮಾರ್, ನಿರ್ದೇಶಕರುಗಳಾದ ಇ.ಪರಮೇಶ್ವರ್, ಪ್ರದೀಪ್ ವಿ. ಎಲಿ, ಗಣೇಶ್ ಎಂ. ಅಂಗಡಿ ಮುಂತಾದವರು ಉಪಸ್ಥಿತರಿದ್ದರು.